ಕರೆದಿವೆ ಈಗ ಕಿರಿದಾದ ದಾರಿಗಳು ಮರಳಿ ಬಾ ಮನುಜ ಹಳ್ಳಿಗಳೆಡೆಗೆ,
ನಿನ್ನ ಊರನ್ನು ಬಿಟ್ಟು ಓಡುವೆ ಏಕೆ ಹಣದ ಅಮಲು ಏರಿತೆ ತಲೆಗೆ?
ಮುಗಿಯದ ನಮ್ಮ ಆಸೆಗಳ ತೀರಿಸಲು ಹಳ್ಳಿಗಳೇ ಬಲಿಯಾಗಿವೆ,
ನಿನ್ನಯ ಬಯಕೆ ತೀರಿದರೂ ನೆಮ್ಮದಿ ನೀಡದ ಪಟ್ಟಣವು ನಿನಗೊಂದು ವರವೇ?
ಬಾ ಗೆಳೆಯ ಹೋಗಣ ಮರಳಿ ನಮ್ಮ ಹಳ್ಳಿಗಳಿಗೆ ಈಗ,
ಮರಳಿದರೆ ನಾವು ನಮ್ಮ ಗೂಡಿಗೆ ಇನ್ನು ಬಾರದಿರುವುದೇ ಯೋಗ?
ಮರಳಿ ಹೋಗೋಣ ಬಾ ಗೆಳೆಯ ನಾವು ನಮ್ಮ ಊರಿಗೆ,
ಹಾರಿ ಮುಗಿಲ ಕೊನೆ ಕಾಣದ ಹಕ್ಕಿ ಮರಳಿದ ಹಾಗೆ ತನ್ನ ಗೂಡಿಗೆ!



- ಆದರ್ಶ