ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಐದು ನಿಮಿಷ
ಹಸಿದ ಹೊಟ್ಟೆಗೆ ಅನ್ನವೇ ದೇವರು. ಪ್ರಪಂಚದ ಪ್ರತಿಯೊಂದು ಅಣುವೂ ಸಹ ತನ್ನ ಹಸಿವನ್ನು ನೀಗಿಸುವ ಸಲುವಾಗಿಯೇ ಎಲ್ಲ ಚಲನವಲನಗಳ ನಡೆಸುತ್ತಿವೆ. ದಾಸರು ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎಂದು ಹೇಳಿದ್ದಾರೆ, ಅವರ ಮಾತಂತೆ ನಡೆಯುವ ನಮ್ಮ ಗೆಳೆಯರ ಸಣ್ಣ ಬಳಗದ ಹುಡುಗರು ಆಗಾಗ ದೇವಸ್ಥಾನಗಳಿಗೆ ಹೋದರೆ, ಮೊದಲು ಪ್ರಸಾದದ ಸುಳಿವನ್ನು ಹುಡುಕುತ್ತೇವೆ. ಕರ್ನಾಟಕದಲ್ಲಿ ಎಷ್ಟೋ ದೇವಸ್ಥಾನಗಳಲ್ಲಿ ದೇವರ ನೋಡಲು ಬಂದ ಜನರಿಗೆ ಊಟದ ವ್ಯವಸ್ಥೆ ಮಾಡುವುದು ವಿಶೇಷ. ಧರ್ಮಸ್ಥಳ, ಶೃಂಗೇರಿ, ಹೊರನಾಡು,...
-
ಒಂದು ಹೆಜ್ಜೆ
ಒಂದು ಹೆಜ್ಜೆ ನನ್ನೆಡೆಗೆ ನೀನಿಟ್ಟರೆ ನಿನಗಾಗೆ ಎರಡು ಹೆಜ್ಜೆಯ ನಾ ಇಡುವೆ, ಜೊತೆಯಲ್ಲಿ ಬಾ ಎಂದು ಕರೆಯದಿದ್ದರೂ ನಿನ್ನೊಡನೆ ಅನುಗಾಲ ನಾನಿರುವೆ; ಗಾಳಿ-ಮೋಡವು ಎಲ್ಲವ ಮೀರಿ ಹಾರಿ ಬೀಗಿದರೇನಂತೆ, ನಮ್ಮಯ ಸ್ನೇಹ ಹಾರುವುದು ನೋಡು ಗಾಳಿಯ ಹಿಡಿತಕೂ ಬಾರದಂತೆ; ಒಂದು ಸಜ್ಞೆ ನೀ ಕೊಟ್ಟರೆ ನನಗೆ, ಬರುವೆನು ಎಲ್ಲವ ತೊರೆದು, ಒಂದು ಹೆಜ್ಜೆ ನನ್ನೆಡೆಗೆ ನೀನಿಟ್ಟರೆ ನಿನಗಾಗೆ ಎರಡು ಹೆಜ್ಜೆಯ ನಾ ಇಡುವೆ, ಎಲ್ಲ ಅನುಮಾನಗಳ ಮುರಿದು! -ಆದರ್ಶ
-
ನಾ ಅರಿಯದ ನೋವು
ಮರವೊಂದು ಬಳ್ಳಿಯಿಂದ ಬೇರಾಗಬಂದಾಗ ಬಳ್ಳಿಯು ದೂರ ಸರಿದು ಮತ್ತೆಲ್ಲೋ ನಿಲ್ಲಬೇಕಾಗ, ಮರದ ಮನದಲ್ಲಿ, ಬಳ್ಳಿಯ ಒಡಲಲ್ಲಿ ಮೂಡಿಬಂದದ್ದು ನಾ; ಅರಿಯದಂಥ ನೋವು! ಮರಿಯೊಂದು ಗೂಡನ್ನು ತೊರೆದು ಬರುವಾಗ ತಾಯಿಯು ಕಂಬನಿ ಸುರಿಸಿ ನೋಡುತಿರುವಾಗ ಮರಿಯ ಭಯದಲ್ಲಿ, ತಾಯಿಯ ಕರುಳಲ್ಲಿ ಬೆರೆತುಬಂದದ್ದು ನಾ; ಅರಿಯದಂಥ ನೋವು! ಬೆಳೆದು ಬಂದ ಹಾದಿಯ ಜಾಡನ್ನು ತಾನೇ ಅಳಿಸಿ ಕಾಣದ ಹೊಸ ಹಾದಿಯ ಸೊಗಸನ್ನು ಅರಸಿ ನಡೆದಿದ್ದ ಹಾದಿಯ ನೆನಪಲ್ಲಿ, ಕಾಣದಂಥ ಹಾದಿಯ ಮೆರುಗಲ್ಲಿ; ಇರುವುದು...
-
ಗೋಧೂಳಿ
ಪ್ರಕೃತಿಯಲ್ಲಿ ಯಾವಾಗಲೂ ಶಕ್ತಿಯಿದ್ದವರದ್ದೇ ಮೇಲುಗೈ ಹಾಗೂ ಬದುಕಿ ಜೀವನ ಮುಂದುವರಿಸುವ ಅರ್ಹತೆ ಅಂತಾಗುತ್ತದೆ. ಎಣಿಸಲಾಗದ ಅದೆಷ್ಟೋ ಯುಗಗಳು ಹೀಗೆ ಕಳೆದಿವೆ. ಆದರೆ ಕಾಲಾಂತರದಲ್ಲಿ ಮನುಷ್ಯತ್ವದ ಜನನವಾದ ನಂತರ ಈ ಪ್ರಕೃತಿಯ ನಿಯಮದಲ್ಲಿ ಸ್ವಲ್ಪ ಬದಲಾವಣೆ ಬಂದಂತಿದೆ. ಮನುಷ್ಯನು ಇತರ ಪ್ರಾಣಿ, ಪಕ್ಷಿ, ಕೀಟಗಳಿಗಿಂತ ಶ್ಯಕ್ತನಲ್ಲವಾದರೂ ಇತರೆ ಪ್ರಾಣಿಗಳು ಅಳಿದರೂ ಮಾನವನು ಬದುಕುತ್ತಾ ಇರುವನು. ಈಗ ಮನುಷ್ಯನ ಯೋಚನಾ ಶಕ್ತಿಯೇ ಅವನ ದೈಹಿಕ ಶಕ್ತಿಯಾಗಿದೆ. ಪ್ರಕೃತಿಯಲ್ಲಿ ಬದುಕೋದ ಕಲಿಯುತ್ತಿರುವಾಗ ಇತರ ಪ್ರಾಣಿಗಳ...
-
ಪ್ರವರ
ಅಂತ್ಯದಲ್ಲಿ ನಡುಗುವುದು ಯುಗಗಳಿಂದ ನಿಂತಿದ್ದ ಗೋಪುರ, ಅದರಡಿಯಲ್ಲಿ ಕಳೆದು ಹೋಗುವುದು ನಮ್ಮಯ ಪ್ರವರ; ಸಮಯದ ಸ್ಪರ್ಶಕೆ ಮಾಸದೆ ಉಳಿವುದೇ ಬಣ್ಣವು, ಅದೆಷ್ಟು ವರುಷ ತಡೆದು ನಿಲ್ಲುವುದು ಯುದ್ಧ ನಿರತ ಮನವು? ಎಂದಾದರೂ ಚಿಗುರಲೇಬೇಕು ಶಾಂತಿಯಿಂದ ಹೂವು, ಅದರ ಕಂಪಲ್ಲೇ ಮರೆಯಾಗಬೇಕು ಯುದ್ಧ ತಂದ ಸಾವು. ಅಂತ್ಯದಲ್ಲಿ ನಡುಗುವುದು ಯುಗಗಳಿಂದ ನಿಂತಿದ್ದ ಗೋಪುರ, ಅದರಡಿಯಿಂದಲೇ ಏಳುವುದು ನಮ್ಮ ನವಯುಗದ ಪ್ರವರ! -ಆದರ್ಶ