ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಸಣ್ಣ ಉಳಿತಾಯ
ಮನುಷ್ಯನ ಉಗಮವಾದಾಗಿನಿಂದ ನೀರು ಬರೀ ಬಳಕೆಯ ವಸ್ತುವಾಗಿಯೇ ಉಳಿದಿದೆ ಹೊರತು, ಉಳಿಸಬೇಕಾದ ವಸ್ತುವೆಂದು ಅರಿತವರು ತೀರಾ ಕಡಿಮೆ. ಇತ್ತೀಚಿಗಷ್ಟೇ ನೀರನ್ನು ಉಳಿಸಬೇಕು, ಮತ್ತದರ ಬಳಕೆ ಕಡಿಮೆ ಮಾಡಬೇಕು ಎಂಬ ಆಲೋಚನೆ ಹೊರ ಬಂದಿದ್ದು. ಈಗ ಬಳಸುತ್ತಿರುವ ವೇಗದಲ್ಲಿ ನೀರನ್ನು ಮುಂದೂ ಬಳಸುತ್ತಿದ್ದರೆ, ಇನ್ನು ಕೆಲವೇ ಶತಮಾನಗಳಲ್ಲಿ ಇಡೀ ಭೂಮಿಯ ಜನರು ಕುಡಿಯುವ ನೀರಿಲ್ಲದೆ ಸಾಯುವ ಸ್ಥಿತಿಯ ತಲುಪಬಹುದು. “ಜೀವನಾನ ಇವತ್ತು ಅನುಭವಿಸಬೇಕು ಅಂತ ನಮ್ಮ ಜನ ತಮ್ಮ ಮುಂದಿನ ತಲೆಮಾರಿಗೂ...
-
ಆತ್ಮೀಯ
ಬಸ್ರೂರು ಪ್ರೌಢಶಾಲೆಯಲ್ಲಿ ಇದ್ದ ಸಮಯ ಅದು. ಸಮಾಜ ಅಧ್ಯಾಪಕರು ಒಬ್ಬ ರಾಜನ ಬಗ್ಗೆ ಹೇಳುತ್ತ " ಅವನು ಆ ಯುದ್ದದಲ್ಲಿ ಸತ್ತನು" ಅಂದ್ರು. ತಟ್ಟನೆ ಅವರೇ "ರಾಜರಿಗೆ, ದೊಡ್ಡ ಮನುಷ್ಯರಿಗೆ ಹಾಗೇ ಸತ್ತರು ಅನ್ನಬಾರದು, ಮರಣ ಹೊಂದಿದ ಅನ್ನಬೇಕು" ಎಂದರು. ಹಾಗೇ ಮುಂದುವರಿಸಿ "ನೀವು ಮನೆಯ ಹತ್ತಿರ ಯಾರಾದರೂ ಸತ್ತರೆ ಏನು ಹೇಳ್ತೀರಾ?" ಎಂದು ಒಬ್ಬೊಬ್ಬರಿಗೆ ಕೇಳಿದರು. ಆಗ ಒಬ್ಬ ಕೊನೆಯುಸಿರು ಎಳೆದರು ಎನ್ನುತ್ತೇನೆ ಎಂದು ಉಸಿರು ಎಳೆದುಕೊಂಡರೆ, ಇನ್ನೂಬ್ಬ...
-
ಕತ್ತಲ ಸಮಯ
ಎಂತೆಂಥ ಕತ್ತಲೆಯ ಸಮಯ ಕಾದಿವೆಯೋ ನಮಗೆ, ಕಣ್ಣಿನ ಬೆಳಕನು ಮರೆಮಾಚಲು, ನೆನೆದರೆ ಒಮ್ಮೆಲೆ ಭಯವಾಗುವುದು ಮನಕೆ ನಿಂತಲ್ಲೇ ನಡುಗುವುದು ಕಾಲು. ಓಡುವುದು ಹೇಗೆ ಉಸುಕಿನಲ್ಲಿ, ನಡುಗುತಿರುವಾಗ ನೆಲವು ಅಡಿಯಲ್ಲಿ. ಏಳುವುದು ಸರಿಯೇ ನಸುಕಿನಲ್ಲಿ, ಸೂರ್ಯನೇ ಮೂಡದಿರೆ ಮೂಡಣದಲ್ಲಿ! ಇನ್ನೆಂಥ ಕತ್ತಲೆಯ ಕಾಲವೂ ಕಾದಿದೆಯೊ ನಮ್ಮಯ ದೂರದ ನೋಟದ ಆಚೆಗೆ. ಮರಣವೇ ಎದುರಿಗೆ ನಿಲ್ಲುವ ಭಾವನೆ, ಮರೆತರೂ ನಮ್ಮನು ನಾವು ಅರೆಘಳಿಗೆ. - ಆದರ್ಶ
-
ಮಳೆಗಾಲ ಬರುತಿದೆ
ನಾನು ಹುಟ್ಟಿದ ವರುಷ ನಮ್ಮೂರ ಕೆರೆಯ ಕೋಡಿ ಬಿದ್ದಿತ್ತಂತೆ. ಅದಾದ ನಂತರ ನಾನು ಕಣ್ಣು ಬಿಟ್ಟು ಓಡಾಡುವ ಹಾಗಾದಾಗ ಕೆರೆ ತುಂಬಿ ಕೋಡಿ ಬಿದ್ದ ಸುದ್ದಿಯನ್ನ ಕೇಳಲಿಲ್ಲ. ಆದ್ರೆ ಜೋರು ಅನ್ನುವಂತ ಮಳೆ ಬಿದ್ದಿದ್ದನ್ನು ಊರಲ್ಲಿ ನಮ್ಮ ಮನೆಯ ಕಿಟಕಿಯ ಗೂಡಲ್ಲಿ ಕುಳಿತುಕೊಂಡು ನೋಡಿದ್ದೆ. ಒಂದು ಇನ್ನೂರು ಮೀಟರ್ ದೂರದ ಸಣ್ಣ ಹಳ್ಳದಲ್ಲಿ ಭರ್ಜರಿಯಾಗಿ ಮಳೆ ನೀರು ಹರಿಯುತ್ತಿತ್ತು. ಆ ದಿನಕ್ಕೆ ನನಗೆ ಅದು ನಡುಕ ಹುಟ್ತಿಸಿದಂತ ಸೊಗಸಾದ ಮಳೆಯಾಗಿತ್ತು....
-
ನಿನ್ನ ಮನೆ
ಅತಿಶಯ ಮನದ ವಿಷಯಾರಾಧನೆ, ದೂರ ಇರುವ ಕಾಲದಿ ಅನುಕ್ಷಣವೂ ಆಪಾದನೆ. ಪ್ರೇಮವು ಈಗ ಎಲ್ಲೆಡೆ ಹರಡಿದ ಕಲ್ಪನೆ, ಬಿಗುಮಾನ ಇನ್ನು ಏತಕೆ, ನನ್ನ ಹೃದಯವೇ ಈಗ ನಿನ್ನ ಮನೆ! ಅರಳುವ ಮುನ್ನವೇ ನಿನ್ನ ಗಂಧವು ಹರಿದಿದೆ, ಅನುಭವಿಸದೆ ಇನ್ನು ನನಗೆ, ಬೇರೆ ದಾರಿ ಎಲ್ಲಿದೆ. ಕಾಲವೂ ಈಗ ನಿನ್ನ ಸ್ಪರ್ಶಕೆ ನಿಂತಂತ ಸೂಚನೆ, ಅನುಮಾನ ಇನ್ನು ಏತಕೆ, ನನ್ನ ಹೃದಯವೇ ಈಗ ನಿನ್ನ ಮನೆ. ಅತಿರೇಕವೇ ಅಲ್ಲ, ನಿನ್ನ ಕಾದು...