ಎಂತೆಂಥ ಕತ್ತಲೆಯ ಸಮಯ ಕಾದಿವೆಯೋ ನಮಗೆ,
ಕಣ್ಣಿನ ಬೆಳಕನು ಮರೆಮಾಚಲು,
ನೆನೆದರೆ ಒಮ್ಮೆಲೆ ಭಯವಾಗುವುದು ಮನಕೆ
ನಿಂತಲ್ಲೇ ನಡುಗುವುದು ಕಾಲು.

ಓಡುವುದು ಹೇಗೆ ಉಸುಕಿನಲ್ಲಿ,
ನಡುಗುತಿರುವಾಗ ನೆಲವು ಅಡಿಯಲ್ಲಿ.
ಏಳುವುದು ಸರಿಯೇ ನಸುಕಿನಲ್ಲಿ,
ಸೂರ್ಯನೇ ಮೂಡದಿರೆ ಮೂಡಣದಲ್ಲಿ!

ಇನ್ನೆಂಥ ಕತ್ತಲೆಯ ಕಾಲವೂ ಕಾದಿದೆಯೊ
ನಮ್ಮಯ ದೂರದ ನೋಟದ ಆಚೆಗೆ.
ಮರಣವೇ ಎದುರಿಗೆ ನಿಲ್ಲುವ ಭಾವನೆ,
ಮರೆತರೂ ನಮ್ಮನು ನಾವು ಅರೆಘಳಿಗೆ.

- ಆದರ್ಶ