ಕನಸಿನ ಬಾಗಿಲು
by Adarsha
ಹೊತ್ತ ಭಾರ ಇಳಿದು ಹಗುರಾಯ್ತು ಹೆಗಲು,
ಇಳಿಸಂಜೆ ನೇಸರ ಮುಳುಗಿ ಕೆಂಪಾದಂಗೆ ಮುಗಿಲು.
ಗಗನ ಕೂಗಿ ಸುರಿಸೆ ತನ್ನೆಲ್ಲ ಅಳಲು,
ಬೆಳಕು ಬೀರಿ ಬೆರಗು ದಾಟಿದೆ ಕನಸಿನ ಬಾಗಿಲು.
ಹರಿವಂತೆ ಹೊಳೆ, ಕಂಡಾಗ ಕಡಲ,
ಓಡಿತ್ತು ಈ ಮನ, ನಿಲುಗಡೆ ನೋಡಲು.
ಬೆಳಕಿಗೆ ಎಚ್ಚೆತ್ತ ಇರುಳು, ಕಾಣಲು ಹೊರಟಂತೆ ಹಗಲ,
ಮರುಳು ಮನದ ಹವಣಿಕೆ ದಾಟಿದೆ ಕನಸಿನ ಬಾಗಿಲ.
- ಆದರ್ಶ