ಜೊತೆಯಾಗಬೇಕು ಎದೆಗೆ ಎದೆ, ತೊಡೆಗೆ ತೊಡೆ,
ತೋಳಿಗೆ ತೋಳು ತಟ್ಟಿ, ಜೊತೆ ನಿಲ್ಲೋಳು.
ಬೆಟ್ಟ, ಕಾಡು, ಕಣಿವೆ, ನಾಡಲ್ಲೂ ನೆರಳಾಗಿರೋಳು.
ಮುಗಿಲೆತ್ತರದ ಬೆಟ್ಟ ಏರೋಳು,
ಕಡಲಾಳಕೆ ಈಜೋಳು,
ಜೊತೆಯಾಗಬೇಕು ಬದುಕಿಗೆ ಇಂತೋಳು.

ಊರೊಂದಿಗಿನ ಕಾಳಗದಲಿ ಬೆನ್ನಿಗಿರೋಳು,
ತುಂಬಿಕೊಂಡು ಸಿಡುಗೋಪ ಕಂಗಳ.
ಮೃದುವಾಗಿ ದಿನದಿನವೂ ಹೂಗಳ ಬೆಳೆಸೋಳು,
ತುಂಬುಂವಂತೆ ಮನೆಯಂಗಳ.

ಜೊತೆಯಾಗಬೇಕು ಎದೆಗೆ ಎದೆ, ತೊಡೆಗೆ ತೊಡೆ,
ತೋಳಿಗೆ ತೋಳು ತಟ್ಟಿ, ಜೊತೆ ನಿಲ್ಲೋಳು.
ಬದುಕಿನ ಬೆಳಕಲ್ಲಿ ನೆರಳಾಗಿರೋಳು,
ಕತ್ತಲೆಯಲ್ಲಿ ಅರಿವಾಗುವವಳು,
ಒಡಲಾಳಕೆ ಇಳಿವವಳು,
ಜೊತೆಯಾಗಬೇಕು ಬದುಕಿಗೆ ಇಂತೋಳು.

- ಆದರ್ಶ