ದೊಡ್ಡ ಗೋಡೆಯೊಂದಿರಬೇಕು ಮನೆಯಲಿ.
ಹಳೆ ನೆನಪು ಮೆಲುಕು ಹಾಕಲು.
ಮನದ ಮೇಲೆ ಗೀಚಿದ, ಕಲೆಗಳ ಅಳಿಸಲು.

ದೊಡ್ಡ ಗೋಡೆಯೊಂದಿರಬೇಕು ಮನೆಯಲಿ,
ಎಲ್ಲೂ ಆಡದ ಮಾತ ಬರೆಯಲು,
ಯಾರೂ ಕೇಳದ ಗುಟ್ಟ ತೆರೆಯಲು.

ಬಿಳಿ ಗೊಡೆ ಇರಬೇಕು ಮನೆಯಲಿ,
ಮನದ ಬಣ್ಣ ಎರಚುತಿರಲು,
ಮನಸನ್ನು ಮತ್ತೆ ತಿಳಿ ಮಾಡಲು.

- ಆದರ್ಶ