ವಿವರವೆಲ್ಲಿ ಬದುಕಿಗೆ,
ಬೆಳಗ್ಗೆ ಬಂದೋದ ಕನಸಿಗೆ.
ಪ್ರವರ ಎಲ್ಲಿ ನಾಳೆಗೆ,
ಇಂದು ಸಿಕ್ಕ ಗಳಿಗೆಗೆ.

ಹೊಸತು ಸದ್ದು ಕೇಳುವ,
ಬದುಕು ಯಾರ ದೀವಿಗೆ?
ನಿತ್ಯ ಪ್ರಶ್ನೆ ಕೇಳುವ,
ಮನವು ನಡೆವುದೆಲ್ಲಿಗೆ?

ವಿವರ ಯಾಕೆ ಬದುಕಿಗೆ,
ತಾನೇ ಬಂದ ಒಳಿತಿಗೆ.
ಗುರಿಯೊಂದ ಅರಸೊದ್ಯಾಕೆ,
ತಾನೇ ತಲುಪಿಸುವುದು ಬಾಳ ನಡಿಗೆ.

- ಆದರ್ಶ