ಎದೆ ಕಿವುಚಿಬಿಡು ಹುಡುಗಿ,
ಇನ್ನೇನಿದೆ ಬದುಕಲಿ,
ನಾನು ಕಿರುಚಿ ಹೇಳುವೆ,
ನಿಜ ಸಾವಿದೆ ಒಲವಲಿ.

ಬೇಸಿಗೆಲೂ ಅಂಟಿಕೊಂಡು ಇರಬೇಕಂತಿದ್ದೆ,
ಆದರೆ, ಮೊದಲ ಮಳೆಗಾಲಕೆ ನೀ ನನ್ನ ಹೊರದಬ್ಬಿದೆ.
ಎದೆ ಪರಚಿಬಿಡು ಹುಡುಗಿ, ಇನ್ನೇನಿದೆ ಒಲವಲಿ,
ಕಿತ್ತು ಸುಟ್ಟುಬಿಡುವೆ ಎದೆಯ, ನೆನಪಿನೊಲೆಯಲಿ.

ನೆಟ್ಟಾಗಿದೆ ತವಕದಿ, ನಮ್ಮ ಸುತ್ತ ನೂರು ಬೇಲಿ,
ಎದೆಯ ಹರಿದುಬಿಡು ಹುಡುಗಿ, ಇನ್ನೇನುಳಿದಿಲ್ಲ ಇಲ್ಲಿ,
ನಮ್ಮ ಭಾವನೆಗಳಿಗೆ ಈಗ ನಾವೆ ಕಾವಲು,
ಸುಳ್ಳು ಬಂಧನ ಯಾಕೆ, ಇನ್ನು ನಾವು ಜೊತೆಗಿರಲು.

- ಆದರ್ಶ