ನಾವು ಕಟುಕರಾಗಿರಬೋದು, ಮನ್ಶತ್ವ ಇಲ್ದೋರಲ್ಲ.
ಅನುಕಂಪ ತೋರದಿರಬೋದು, ನಡೆಯಲ್ಲಿ ಸುಳ್ಳಿಲ್ಲ.
ಇದು ನಮಗೆ ಪರಿಸರ ಕೊಟ್ಟ ರೂಪ,
ಇದರರಿವು ಎಲ್ಲರಿಗಲ್ಲ, ಆದರಿದಲ್ಲ ಶಾಪ.

ನಾವು ಅಳದವರಾಗಿರಬೋದು, ನೋವು ಅರಿಯದವರಲ್ಲ.
ಮರುಗದವರಾಗಿರಬೋದು, ಮನ್ಸಿಲ್ಲದೋರಲ್ಲ.
ಈ ಗುಣವ ಒಳಗೆ ಬೆಳೆಸಿದೆ ಸುತ್ತಲ ಲೋಕ,
ಇದರಾಳ ಎಲ್ಲರಿಗಲ್ಲ, ಅಡಗಿದೆ ಒಳಗೆಲ್ಲ ನಾಕ.

ನಾವು ಮನುಜರಾಗಿರಬೋದು, ಸಹಜನರಲ್ಲ.
ಒರಟರಾಗಿರಬೋದು, ಕರುಣೆ ಇರದವರಲ್ಲ.
ಇದೆ ನಮ್ಮ ಒಳಗೆ ಪರಿಸರ ಬಿತ್ತ ಬೀಜ,
ಎಲ್ಲರಂಗೆ ನಾವಲ್ಲ, ಇದೆ ನಮ್ಮ ನಿಜ.

- ಆದರ್ಶ