ಬಾಗಿಲು ಮುಚ್ಚಿ, ಕೋಣೆಯ ಹೊಕ್ಕು,
ಕನಸಿನ ದೀಪ ಹಚ್ಚಿ, ಚೆಲ್ಲಿದೆ ಬೆಳಕು.
ಇರುಳೆ ಹೊತ್ತಿ ಉರಿದಿದೆ ಈಗ,
ತೆಗೆದಾಗ ಕನಸಿನ ಕೋಣೆಯ ಬೀಗ.

ಕತ್ತಲೆಯಲ್ಲಿ ಕಂಗಳು ಅರಳಿ,
ದಣಿದ ಜೀವಕೆ ಹೊಸತನ ತುಂಬಿದೆ.
ನಿದ್ದೆಯಲಿ ಬದುಕಿಗೆ ಎದೆಬಡಿತ ಮರಳಿ,
ಮಣಿದ ಮನಸ್ಸಿಗೆ ಸಾಂತ್ವಾನ ಹೇಳಿದೆ.

ಎದ್ದಾಗ ಮುಂಜಾನೆ ಲೋಕವೇ ಹೊಸದು,
ಹಗಲಿಗೆ ಕನಸೇ ಅಂಕಿತ.
ನಡೆದಾಗ ಅನುದಿನವು ದಣಿವೆ ಇರದು,
ಹೆಗಲಿಗೇರಿ ನನಸಿನ ಸ್ವಾಗತ

- ಆದರ್ಶ