ಬೇಸಿಗೆಯ ದಿನ
by Adarsha
ಮತ್ತೊಂದು ಬೇಸಿಗೆ ಈ ನನ್ನ ವಯಸ್ಸಿಗೆ
ಎಲೆ ಮುದುರಿ ಎಲೆ ಉದುರಿ ಬರಿದಾಗಿದೆ.
ಬಂದಂಗೆ ಒಣ ಗಾಳಿ, ನಿಂದಂಗೆ ಹಳೆ ಚಾಳಿ,
ನನ್ನೊಡನೆ ಬೇಸಿಗೆ ಬಂದಾಗಿದೆ.
ಏಕಾಂತ ಮರದಡಿ, ನೆಮ್ಮದಿ ನೆರಳಡಿ,
ಹುಲ್ಲು ಹಾಸಿನ ಮೇಲೆ ಆಟಾಡಿದೆ.
ಬೆಚ್ಚಗಿನ ಬಿಸಿಲು, ಬೆಳಗಿನ ಹೊತ್ತು,
ಬೇಸಿಗೆಯ ಕಾವು, ಚಳಿಗಾಲಕೆಶ್ಟು ಗೊತ್ತು?
ಬಂಗಾರದ ಬೆಳಕು ಸಂಜೆಗೆ ಏರಿ,
ಇಳಿಹೊತ್ತಿನ ಧೂಳು ಆಗಸಕೆ ಹಾರಿ,
ಬಂದಂಗಿದೆ ಊರಿಗೆ ಮತ್ತೊಂದು ಬಗೆ,
ಮತ್ತೊಮ್ಮೆ ತಂತು ಬಂಗಾರದ ಬೇಸಿಗೆ.
- ಆದರ್ಶ