ನಾಕ
by Adarsha
ಕೈಕೊಡೊ ಊರಲ್ಲಿ, ಚೊಂಬು ಕೊಡೋಳು ಸಿಕ್ಳು,
ಬದುಕು ನಶ್ವರ ಅನ್ಕಂಡಿದ್ದೋನಿಗೆ, ಹಿಂಗೆ ಕಟ್ಟಾಕಿದ್ಯಲ್ಲೊ ಚೊಂಬೇಶ್ವರ.
ಈಗೆತ್ಲಾಗೆ ಓಡೋಗ್ಲಿ, ಸುತ್ತೆಲ್ಲ ಇವ್ಳೆ.
ಹೊತ್ತನ್ನ ಕಳಿತಾಳೆ ಮಾತುಮಾತಲ್ಲೆ.
ಮರುಮಾತೆ ಬಾರದು, ಏನಂತ ಹೇಳ್ಲಿ,
ಗೊಂದಲ ಏನೂ ಇಲ್ಲ, ನಾ ಕಟ್ಟಾಕಿರುವ ಗೂಳಿ.
ಕೈಕೊಡೋರ ನಡುವೆ, ಚೊಂಬು ಕೊಡೋಳು ಸಿಕ್ಳು,
ಬದುಕು ಆಥರ ಅಂತಿದ್ದೋನಿಗೆ, ಈಥರ ಮಾಡಿದ್ಯಲ್ಲೊ ಚೊಂಬೇಶ್ವರ.
ಅಲ್ಲಿಲ್ಲ ಇಲ್ಲಿಲ್ಲ ಇದರಂಗೆ ಹೋಲಿಕೆ,
ಇವಳ ಜಗಳವು, ಈ ಮನೆಗಂತೆ ಮಲ್ಲಿಗೆ.
ಒಡವೆ, ಅಲಂಕಾರ, ಇವುಗಳೆಲ್ಲ ಯಾಕೆ,
ತುಂಬಿದೆ ನಾಕ, ಕಾರುತಿರುವ ಕಣ್ಣೊಳಗೆ.
ಕೈಕೊಡೋರ ನಡುವೆ, ಚೊಂಬು ಕೊಡೋಳು ಬಂದ್ಳು,
ಬದುಕಲ್ಲೇನಿಲ್ಲ ಉಪ್ಪು ಖಾರ, ಅಂದೋನಿಗ್ಹಿಂಗ್ ಮಾಡಿದ್ಯಲ್ಲೊ ಚೊಂಬೇಶ್ವರ.
- ಆದರ್ಶ