ಸೋತರೆ ಎತ್ತಲ್ಲೊಲ್ಲೆ, ಗೆದ್ದರೆ ಪ್ರಶಂಸಿಸಲ್ಲೊಲ್ಲೆ,
ಅವ ಹೆಚ್ಚೆಂದು ಹಿಗ್ಗಿಸಲ್ಲೊಲ್ಲೆ, ಇವ ಕೀಳೆಂದು ತಗ್ಗಿಸಲ್ಲೊಲ್ಲೆ,
ನಿನ್ನ ಮೊಗವನು ತೋರಲೊಲ್ಲೆ, ಹುಡುಕ ಹೋದರೆ ಸಿಗಲ್ಲೊಲ್ಲೆ .

ಬೈದವನಲ್ಲ ಅಪ್ಪನಂತೆ,
ಮುದ್ದಾಡಿದವನಲ್ಲ ಅಮ್ಮನಂತೆ,
ಬಾ ಎಂದು ಕರೆದವನಲ್ಲ, ಇದು ಬೇಕೆಂದು ಕೇಳಲಿಲ್ಲ.

ಹುಟ್ಟುತ್ತಲೇ ಹೇಳುವರು ನೀ ಇರುವೆ ಮೇಲೆ,
ಬೆಳೆಯುತ್ತ ತಿಳಿಸಿದರು ನಿನ್ನ ಕರ್ಮಗಳ ಲೀಲೆ,
ನಿನ್ನ ನೆನೆದರೆ ಹೆದರುವರೆಲ್ಲ, ಆದರೆ ನಿನ್ನ ಕಂಡವರಾರು ಇಲ್ಲ.

ನಡೆಸುತ್ತಿರುವರು ನಿನ್ನ ಹುಡುಕುವ ಸಂಶೋಧನೆ,
ಕೆಲವರಿಗೆ ಅದುವೇ ಜೀವನದ ಸಾಧನೆ.
ನೀ ಅಡಗಿರುವೆಯಾದರು ಎಲ್ಲಿ?
ಸಿಗುವೆಯ ನಾ ಹೋಗುವ ಮುನ್ನ, ಒಮ್ಮೆ ನೀನಿಲ್ಲಿ.

- ಸೌಮ್ಯ ಪುರದ್