ಕಮ್ಮಾರನಾಗಬೇಡ ನೀ, ಕುಂಬಾರನಾಗಬೇಡ,
ಕತ್ತಿ ಹಿಡಿಯಬೇಡ ನೀ, ಕ್ಷತ್ರಿಯನಾಗಬೇಡ,
ದುಡಿದು ಗಳಿಸಿ ನಿನ್ನೊಲವಿನಂತಾಗಬೇಡ.
ಏನೂ ಆಗಬೇಡ ನೀ,
ಕೊನೆಗೆ ಮಾನವನಾಗಬೇಡ.

ಬುದ್ಧಿ ಓಡಿಸಬೇಡ ನೀ, ಬೊಮ್ಮನಾಗಬೇಡ,
ಚಪ್ಪಲಿ ಹೊಲಿಬೇಡ ನೀ, ಚಮ್ಮಾರನಾಗಬೇಡ.
ಬಟ್ಟೆ ಬೇಡ, ವ್ಯಾಪಾರ ಬೇಡ,
ಏನೂ ಆಗಬೇಡ ನೀ, ಬಯಸಿದಂತಾಗಬೇಡ.
ಕೊನೆಗೆ ಮಾನವನಾಗಬೇಡ.

ಮೋಸ ಬೇಡ, ದಾನ ಬೇಡ,
ಧರ್ಮ ಬೇಡ, ನಿನ್ನ ನೀತಿ ನಿಯಮ ಬೇಡ.
ಹಿಂದು, ಮುಸ್ಲಿಮ್, ಬೌದ್ಧ, ಕ್ರೈಸ್ತ,
ಏನೂ ಆಗಬೇಡ ನೀ,
ಕೊನೆಗೆ ಮಾನವನಾಗಬೇಡ.

- ಆದರ್ಶ