ಯಾರದ್ದೂ ಜೀವನ ಮರಣದಲಿ ಮುಗಿದು,
ಮುಚ್ಚಿಟ್ಟರು ಅವರ ಮಣ್ಣಲ್ಲಿ ಅಗೆದು.
ಮುಗಿಯಿತು ಎಲ್ಲ ಒಂದೇ ಘಳಿಗೆಗೆ,
ಸಾಲದು ಈ ಜೀವನ ಬೆರಳೆಣಿಕೆಗೆ.

ಇರುವುದು ಜೀವನ ಮುಂದಿನ ದಿನ,
ಅನ್ನುತ ಅನುದಿನ ಹಾತೊರೆದಿದೆ ಮನ.
ಅರಸಿದ ಆ ಜೀವನ ಸಿಗುವುದು ಎಂದಿಗೆ,
ದಿನಗಳು ಸಿಗದಾಗಿದೆ ಈ ಬೆರಳೆಣಿಕೆಗೆ.

ಈ ಹೊತ್ತಿಗೆ ಈ ದಿನ ಉಸಿರಾಡಿದೆ ಜೀವ,
ಆದರೂ ಮುಂದಿನ ದಿನದ ಆಸರೆಯ ಭಾವ.
ಇಂದಿಗೇಕೆ ತೃಪ್ತಿಯಿಲ್ಲ ಬದುಕುವ ಘಳಿಗೆಗೆ?
ದಿನಗಳು ಸಾಲದಾಗಿವೆ ಈ ಬೆರಳೆಣಿಕೆಗೆ.

- ಆದರ್ಶ