ಒಂದೊಂದು ಯೋಚನೆ ಒಂದೊಂದು ಕಡೆ,
ನೀನೊಂದು ಕಡೆ, ನಾನೊಂದು ಕಡೆ.
ನಮ್ಮ ಬಂಧನದೆ ಸಿಗದಿರೆ ನಮಗೆ ಬಿಡುಗಡೆ,
ಜೀವನ ಕೈಗೆ ಸಿಗದಂಗೆ ಮುಳುಗಡೆ.

ಗಾಳಿಯು ಎಲ್ಲೊ, ದೋಣಿಯು ಎಲ್ಲೊ,
ನಿಂತಲ್ಲೆ ಜೀವನ ನಿಂತಂತಿದೆ.
ಸಾಗುವ ಅಲೆಗಳ ತಡೆದರೆ ಗೋಡೆ,
ಜೀವನ ಕೈಗೆ ಸಿಗದಂಗೆ ಮುಳುಗಡೆ.

ನಿತ್ಯವೂ ನೂತನ ಮೈಲಿಗಲ್ಲು,
ಹೋಲಿಕೆ ಸಿಗದು ಯಾವುದರಲ್ಲು.
ಗಾಳಿಯು ಬೆಂಕಿಯು ಸೇರಿದ ಕಡೆ,
ಅಲ್ಲಿಯೆ ನಮ್ಮ ಬಾಂಧವ್ಯದ ಮುಳುಗಡೆ.

- ಆದರ್ಶ