ಬಯಲು
by Adarsha
ಜಗವ ನೋಡಲು ನಾ ಹೊರಗಿಡೆ ಅಂಗಾಲು,
ಎತ್ತ ನೋಡಿದರೂ ಬರೀ ಬಯಲು.
ನನ್ನೊಳಗಿನ ನೋವು ನಲಿವು ಉಕ್ಕಿ ಹೊರ ಬರಲು,
ಆ ಹೊತ್ತಿಗೆ ಜಗದ ಮುಂದೆ ನಾನೇ ಬಯಲು.
ದೂರದೂರಕೆ ನೋಟ ಹರಿಸಿದೆಡೆ,
ಕಣ್ಣ ತುಂಬುತಿದೆ ಅಗಾಧ ಬಯಲು,
ಒಳ ವಿಚಾರಕೆ ನನ್ನ ಮನಸ್ಸು ಕನಲಿದೆ,
ಬುದ್ಧಿ ಇದು ನನ್ನದು, ಆ ಘಳಿಗೆಗೆ ಬಯಲು.
ಬದುಕಿನ ಬಣ್ಣಗಳಲಿ ನಾ ಮುಳುಗಲು,
ಕಾಣದಾಗಿತ್ತು ಎಲ್ಲವ ತೆರೆದಿಟ್ಟ ಬಯಲು.
ನಿತ್ಯ ನೂತನ ಅನುಭವಕೆ
ಮನದ ಹೊಸಿಲ ನಾ ದಾಟಲು,
ಜಗವಿದು ತೆರೆದುಕೊಂಡಿತು, ನನ್ನಂತೆ ಎಲ್ಲವೂ ಬರೀ ಬಯಲು.
- ಆದರ್ಶ