ನಿಂತಲ್ಲೆ ನಾನು ಜಗವನ್ನ ಮರೆತು,
ನನ್ನೊಳಗಿನ ನನ್ನನ್ನು ನನ್ನಲ್ಲೆ ಅರಿತು,
ಆ ಘಳಿಗೆಗೆ ಮನಸ್ಸಿಗೆ ಏನೊ ಸಮಾಧಾನ,
ಉಚ್ಚೆ ಹೊಯ್ಯುವುದು ನನಗೊಂದು ದಿವ್ಯ ಧ್ಯಾನ.

ಪರಿಸರದ ಅರಿವಿಲ್ಲ, ಹೊತ್ತಿನ ಪರಿವಿಲ್ಲ,
ಬದುಕಿನ ತುಂಬೆಲ್ಲ ಬರಿ ಅಜ್ಞಾನ.
ಎಲ್ಲವೂ ನಶ್ವರ, ಬೇಕಿಲ್ಲ ಎಚ್ಚರ,
ಉಚ್ಚೆ ಹೊಯ್ಯುವುದೇ ನನಗೊಂದು ಪರಮಧ್ಯಾನ.

ಸುತ್ತೆಲ್ಲ ತುಂಬಿದೆ ಗಿಜುಗುಡುವ ಜಗವು,
ಬೇಕು ನಮಗಂತು ಏಕಾಂತದ ವರವು.
ಯಾರ ಜೊತೆಯೂ ಬೇಕಿಲ್ಲ ಎಂಬ ನಿಜದ ಮನನ,
ಉಚ್ಚೆ ಹೊಯ್ಯುವುದು ನನಗೊಂದು ನಿತ್ಯ ಧ್ಯಾನ.

- ಆದರ್ಶ