ಚಿಗುರಿತೀಗ ಒಂದು ರಾಗ,
ಯವ್ವನದಲ್ಲಿ ಎಂಥ ವೇಗ,
ಅನುದಿನವೂ ಮನದಲಿ ಮೂಡಿದೆ ಈಗ,
ಯವ್ವನ ತಂದಂಥ ಹೊಸ ಆವೇಗ.

ಮನದ ಒಳಗೆ ತುಂಬಿ ಕತ್ತಲೆ,
ಬೆಳಕು ಹರಿಯೆ ಎಲ್ಲ ಬೆತ್ತಲೆ,
ಹರೆಯವು ಕಾತರದಿ ಬಂದ ಬೆನ್ನಲ್ಲೆ,
ಸ್ವರ್ಗ ಕೈಗೆಟಕುವುದು ಕುಂತು ಕುಂತಲ್ಲೆ.

ಎದ್ದು ಬಿದ್ದರೂ ಎಲ್ಲ ಸೊಗಸು,
ಹಿಡಿದರೂನೂ ತಡೆಯದ ಬಿರುಸು,
ಬೇಲಿ ಹಾರೆ ನಲಿವುದು ಈಗ,
ಅನುದಿನವೂ ನಮ್ಮ ಮನಸ್ಸು.

ಯವ್ವನ ಇದು ತುಂಬಾ ಚುರುಕು,
ಚೆಲ್ಲುತಿರುವುದು ನಿತ್ಯ ಬೆಳಕು,
ಕಾಮನ ಹಬ್ಬದಂತೆ ಬರುವ ವಯಸ್ಸು,
ಎಂದಿಗೂ ಹೀಗೆ ತುಂಬಿರಬೇಕು.

- ಆದರ್ಶ