ಗೊತ್ತಿರದವರಿಗೆ ಗೌರವ ಕೊಡು,
ಗೊತ್ತಿರುವವರಿಗೆ ಒಲವ ಕೊಡು,
ಬರುವವರಿಗೆ ನಿನ್ನೊಳ್ಳೆ ಮನಸ್ಸೇ ಗೂಡು,
ಬಂದು ಹೋಗುವವರು ಸುಮ್ಮನೆ ಹೋಗ್ಲಿ ಬಿಡು.

ಎತ್ತ ಬಿದ್ದರೂ ಎದ್ದು ಬಿಡು,
ಏಳದಿದ್ದರೂ ಉರುಳಿ ನಲಿದಾಡು,
ಸರಳ ಜೀವನದ ಸುತ್ತ ದಟ್ಟ ಕಾಡು,
ಅತ್ತಿತ್ತ ನೋಡದೆ ಜೀವನವು ನೆಟ್ಟಗೆ ಹೋಗ್ಲಿ ಬಿಡು.

ಜೀವನವಿಹುದು ಆದಿ ಅಂತ್ಯದ ನಡುವೆ,
ನೆಮ್ಮದಿಯೊಂದೆ ಎಂದಿಗೂ ಅದರ ಒಡವೆ,
ಅಗಾಧ ಆಗಸಕೆ ಮನವನ್ನ ತೆರೆದಿಡು,
ಯೋಚನೆಗಳು ದಿಗಂತದೆಡೆಗೆ ಹಾರಿ ಹೋಗ್ಲಿ ಬಿಡು.

- ಆದರ್ಶ