ದೂರದಿಂದ ಚಂದ, ನನ್ನ ನಿನ್ನ ಬಂಧ,
ಸಮಯ ನಿಂತು ಬಿಡಲಿ ಇಲ್ಲಿಯೇ,
ಹತ್ತಿರ ಬರದಂತೆ ನಮ್ಮಿಬ್ಬರ ಛಾಯೆ.

ದೂರದ ಬೆಟ್ಟವೂ ನುಣ್ಣಗೆ ಕಣೆ,
ಹತ್ತಿರ ಹೋದಾಗಲೆ ಅದರ ಸ್ವರೂಪ ಬಯಲು,
ಮದುವೆ ಬಂಧವೂಂದು ದೊಡ್ಡ ಹೊಣೆ,
ಅನುಭವಿಸುವಾಗಲೇ ಇಳಿವುದು ಅದರ ಅಮಲು.

ಮೊದಮೊದಲಿಗೆ ಎಲ್ಲರೂ ಒಳ್ಳೆಯವರೇ
ನಂತರ ತಿಳಿಯಿತಲ್ಲವ ಎಲ್ಲರ ಆಟ,
ಆದರೂ ಒಟ್ಟಿಗಿರುವ ಬಯಕೆ ಯಾಕೆ,
ಒಳ್ಳೆಯದಲ್ಲ ಜೊತೆಗಿರುವ ಜನರ ಕೂಟ.

ದೂರದಿಂದ ಬೆಂಕಿಯೂ ಚಂದ
ಹತ್ತಿರ ಹೋದಾಗಲೇ ಅದರ ಝಳಪಿನ ಅರಿವು,
ದೂರದಿಂದ ಸೊಗಸು ಜೋಡಿಯ ಅಂದ
ಹತ್ತಿರದಿಂದ ಬಹಳ ಹರಿತ ಈ ನಮ್ಮ ಒಲವು.

ದೂರದಿಂದ ಚಂದ, ನನ್ನ ನಿನ್ನ ಬಂಧ,
ಸಮಯ ನಿಂತು ಬಿಡಲಿ ಹೀಗೆಯೇ,
ಎಂದೂ ಬೀರದಂತೆ ನಮ್ಮ ಮೇಲೆ, ಒಲವ ಮಾಯೆ.

- ಆದರ್ಶ