ಮೆಲ್ಲ ನಿನ್ನ ನಡಿಗೆಯ, ದೂರದಿಂದ ನೋಡುತ,
ಮೋಡಗಳ ತಾಕುವ ಬೆಟ್ಟದಿಂದ ಬಂದಿದೆ, ಚಂದ ಮಲೆಯ ಮಾರುತ.

ಬವಣೆಗಳು ಹಗುರವಾಗಿವೆ ಈಗ ನೀ ನನ್ನ ಸೋಕಲು,
ಭಾವನೆಗಳೇ ಬೆರಗಾಗಿವೆ ನೀ ನನ್ನ ತಬ್ಬಲು,
ನನ್ನ ಸುತ್ತಿ ನೀ ನಿಂತಾಗ ಜಗವು ನಿಂತಿದೆ ನೋಡುತ,
ಭುವಿಯ ಸುತ್ತಿ ಬಂದು ನನ್ನದಾಗಿದೆ ಈಗ,
ಚಂದ ಮಲೆಯ ಮಾರುತ!

ಇರುಳು ತಂಪು ಸೂಸುತ
ಚುಕ್ಕಿ ಬೆಳಕ ಚೆಲ್ಲುತ
ಕಾಡನ್ನೆಲ್ಲ ಆವರಿಸಿದೆ ಈಗ ತಂಪಾದ ಮಲೆಯ ಮಾರುತ,

ನಿನ್ನ ದನಿಯ ರಾಗವೀಗ ನನ್ನ ಮನದ ಇಂಗಿತ
ಸುತ್ತ ಲೋಕ ಸೊಗಸಾಗಿದೆ ನಿನ್ನ ಹಾಡ ಕೇಳುತ;
ಅತ್ತ ಇತ್ತ ಬೀಸಿ ನಿನ್ನ ರಾಗಕ್ಕೆ ನುಡಿಸಿ,
ನನ್ನ ಮನವ ತಲುಪಿದೆ ನಲಿವ ಮಲೆಯ ಮಾರುತ.

- ಆದರ್ಶ