ಗುಂಪು ಘರ್ಷಣೆ
by Adarsha
ನನ್ನ ಅವಳ ನಡುವೆ ಸಂದಿ ಸಂದಿಗಳಲ್ಲಿ ಗುಂಪುಘರ್ಷಣೆ,
ಅನುದಿನವು ಅವಳ ಮೇಲೆ ಹೆಚ್ಚುತ್ತಿದೆ ಆಕರ್ಷಣೆ.
ತೆಕ್ಕೆಗೆ ಬಿದ್ದಿದೆ ಈಗ ನೀ ಕೊಟ್ಟ ಒಲವು,
ತೋಳಲ್ಲಿ ಹಿಡಿದಾಗ ನಿನ್ನನ್ನ ಮಾಯವಾಯ್ತು ದಣಿವು.
ನನ್ನ ಸ್ವರಕೆ ಅವಳ ಸ್ವರ ಸೇರಿದಾಗ ನಮ್ಮ ಗುಣಗಳ ಲೋಪ ಸಂಧಿ,
ನನ್ನ ಪ್ರೇಮಕೆ ಅವಳೊಪ್ಪಿಗೆಯು ಸೇರಿದಾಗ ಹೊರಡುವುದು ನಮ್ಮ ಆದೇಶ ಸಂಧಿ;
ನನ್ನ ಮನೆಯ ಹೊಸಿಲ ಅವಳು ತುಳಿಯುವ ಘಳಿಗೆಗೆ ನಮ್ಮ ಆಗಮ ಸಂಧಿ,
ಅಲ್ಲಿಂದ ಎಂದಿಗೂ ಒಬ್ಬರಿಗೊಬ್ಬರ ಸ್ನೇಹದಲ್ಲಿ ನಾವುಗಳು ಬಂಧಿ.
ನನ್ನ ಅವಳ ನಡುವೆ ಸಂದಿ ಸಂದಿಗಳಲ್ಲಿ ಗುಂಪುಘರ್ಷಣೆ,
ಅನುದಿನವು ನಡೆದಿದೆ ನನ್ನೊಳಗೆ ಈಗ ಅವಳ ಮಿಂಚಿನ ಪಾದಾರ್ಪಣೆ.
ತಕ್ಕಂತೆ ಸಮನಾದೆವು ಸುಯೋಗದಲ್ಲಿ ನಾವು,
ತೋಳುಗಳು ಸೇರಿದ ಮೇಲೆ ಮಾಯವಾಗಿದೆ ಈಗ ನಮ್ಮಿಬ್ಬರ ದಣಿವು.
- ಆದರ್ಶ