ನಾವಿಲ್ಲಿಗೆ ಬರೋದೆ ಹೋಗೋಕೆ,
ಮತ್ತ್ಯಾಕೆ ನಮಗಿಲ್ಲಿನ ಸಾವಿರಾರು ಬಯಕೆ;
ಯೋಚನೆಗಳಿಗಿಲ್ಲಿ ಇಲ್ಲ ಯಾವುದೇ ಅಂಕೆ,
ನಡೆದು ಹೋಗುವ ದಾರಿಯಲ್ಲಿ ನಮಗೆಲ್ಲ ನಿಲ್ಲುವ ಹರಕೆ.

ಇಂದು ಇರದಿದ್ದರೆ ನಾಳೆ ನಾವೇ ಇಲ್ಲ,
ನಾವಿಲ್ಲ ಅಂದರೆ ನಾಳೇನೂ ಇರೋದಿಲ್ಲ;
ಇಂದು ನಾಳಿನ ನಡುವೆ ಈ ಬಯಕೆಗಳೇ ಎಲ್ಲ,
ಬಯಕೆಯ ಬಯಲೊಳಗೆ ತಿರುಗುತಿದೆ ಈ ಜೀವನವೆಲ್ಲ.

ಅಳಿಯುವ ಜೀವನದಿ ಉಳಿಯುವ ಯೋಚನೆ,
ಬಯಕೆಯ ಬೇಲಿಯೊಳಗೆ ಅನುದಿನವೂ ಯಾತನೆ;
ನಾವಿಲ್ಲಿಗೆ ಬರೋದೆ ಮಲಗೋಕೆ,
ಮತ್ತ್ಯಾಕೆ ನಮಗೆ ಎದ್ದು ನಿಲ್ಲುವ ಚಿಂತೆ.

- ಆದರ್ಶ