ನಾ ಬಿಡು ಎಂದರೂ ನನ್ನ ಬಿಡದ ಹುಡುಗಿ,
ಪ್ರೀತಿಯ ಅಂತರಂಗದಿ ಇರಿಸಿಹಳು ಹುದುಗಿ.
ಕಾಡು ಮೇಡು ಅಲೆಯುತ್ತಿದ್ದ ನಾನು ಒಬ್ಬ ಯೋಗಿ,
ಕರೆದು ಒಂದೆಡೆ ಕೂರಿಸಿದಳು ನನ್ನ,
ಈಗ ನಾನು ಪ್ರೀತಿ ಬಯಸಿದ ವೈರಾಗಿ.

ನಾ ಬೇಡ ಎಂದರೂ ಕೊಡಲು ಬಂದಳಾ ಹುಡುಗಿ,
ಹುಚ್ಚು ಮನದಲಿ ತುಂಬಿಸಿಕೊಂಡು ಪ್ರೀತಿಯೆಂಬ ಸುಗ್ಗಿ.
ನನ್ನೊಳಗೆ ನನ್ನ ಬಯಸಿ ಅರಸುತ್ತಿದ್ದೆ ನಾನು,
ಅಂತರಂಗದಿ ಅವಳು ಹರಿಯೆ ನಾ ಈಗ ಹಸಿರಾದ ಕಾನು.

ನಾ ಬಿಡು ಎಂದರೂ ನನ್ನ ಬಿಡದ ಹುಡುಗಿ,
ಬೆರೆತಳು ಅಂತರಂಗದಿ ಭಾವನೆಗಳಲಿ ಕರಗಿ,
ಕಾಡು ಮೇಡು ಅಲೆಯುತ್ತಿದ್ದ ನಾನು ಒಬ್ಬ ಯೋಗಿ,
ಕರೆದು ಒಂದೆಡೆ ಕೂರಿಸಿದಳು ನನ್ನ,
ಈಗ ನಾನು ಪ್ರೀತಿ ಬಯಸಿದ ವೈರಾಗಿ.

- ಆದರ್ಶ