ನೋವಿನಲ್ಲಿ ಬರೆದ ಕಥೆಯು ನಲಿವಿನಿಂದ ತುಂಬಿದೆ,
ನಲಿವಿನಲ್ಲಿ ಬರೆದ ಕಥೆಯು ನೋವಿನಲ್ಲಿ ಮುಗಿದಿದೆ.
ಎತ್ತ ಹೋದರೂ ಬದುಕು ಒಂದೇ, ನೋವು ನಲಿವಿನ ಸಾಗರ,
ಹೇಗೇ ಇದ್ದರೂ ಸಾಲದು ನಮಗೆ, ಬೇರೆ ಬಯಕೆಗಳೇ ನಮಗೆ ಸಡಗರ.

ಒಳಗೊಳಗೆ ನೋವು ನಗುತಲಿದ್ದರೂ ಹೊರಗೆಲ್ಲೂ ಯಾರಿಗೂ ತೋರೆವು ನಾವು,
ಹೊರಗೆಲ್ಲ ನಲಿವು ಹರಡಿದ್ದರೂ ನಮ್ಮ ಒಳಗೆಲ್ಲೊ ಅಳುಕುತ್ತಿರುವುದು ಮನವು.
ಎತ್ತ ಹೋದರೂ ಭಾವನೆ ಒಂದೆ ಏನೂ ಅರಿಯದ ಪಯಣ,
ಹೇಗೇ ಇದ್ದರೂ ಸಾಲದು ಮನಕೆ ಬಾಳಿನ ಸಿಹಿಯ ಹೂರಣ.

ನೋವಲ್ಲಿ ಬರೆದ ಕಥೆಯ ಕೊನೆ ನಲಿವಿನಿಂದ ತುಂಬಿದೆ,
ಕೈಗೆಟುಕದ ನಮ್ಮ ಬಯಕೆ ಮನದ ಹೊಸಿಲಲ್ಲಿ ನಿಂತಿದೆ.
ಎತ್ತ ಹೋದರೂ ಬದುಕು ಒಂದೇ, ನೋವು ನಲಿವಿನ ಸಾಗರ,
ಹೇಗೇ ಇದ್ದರೂ ಸಾಲದು ನಮಗೆ, ಬೇರೆ ಬಯಕೆಗಳೇ ನಮಗೆ ಸಡಗರ.

- ಆದರ್ಶ