ಯಾವ ಸೀಮೆಯ ಹೃದಯ ರೋಗ
ಬಂದು ಕುಂತಿದೆ ನನ್ನಲ್ಲಿ ಈಗ.
ಅನುಗಾಲ ಈಗ ಒಂದೇ ರಾಗ,
ಭಾವನೆಗಳಿಗೆ ಹಾಕಿದಂತೆ ಯಾವುದೋ ಬೀಗ.

ಪದಗಳು ಸೋತಿವೆ ಈಗ ತಲುಪಿಸಲು ಮನದಾಳದ ಮಾತು,
ಮೌನದ ದನಿಯೂ ಸೊರಗಿದೆ ಈಗ ತನ್ನದೇ ದುಖಃಕ್ಕೆ ಆತು.
ಅರಿವಿಗೆ ಬಾರದಾಗಿದೆ ಮನದ ಯಾವ ಭಾವನೆಯು ಈಗ,
ಬಂದು ಕುಂತಂತಿದೆ ನನ್ನಲ್ಲಿ ಇಂದು ಯಾವುದೋ ಸೀಮೆಯ ಹೃದಯ ರೋಗ.

ಅರಳುವುದೇ ಮತ್ತೆ ಭಾವನೆಗಳಲ್ಲಿ ಮನವು?
ಹರಡುವುದೇ ಮತ್ತೆ ತನ್ನ ಸುತ್ತೆಲ್ಲ ಒಲವು?
ಗರ ಬಂದಂತೆ ನಡುಗಿದೆ ಹೃದಯದ ಎಲ್ಲ ಮೂಲೆಗಳು ಈಗ,
ಸಿಡಿಲು ಬಡಿದಂತೆ ಬಡಿದಿದೆ ಮನಕೆ ಯಾವುದೋ ಸೀಮೆಯ ಹೃದಯ ರೋಗ.

- ಆದರ್ಶ