ಕೇಳಿಸದ ಶಬ್ಧಗಳು ಸೇರಿಕೊಂಡಿವೆ ನಗರಗಳಿಂದ ದೂರ,
ನಗರಗಳು ಈಗ ಆದಂತಿವೆ ಈ ಭೂಮಿಗೆ ಭಾರ.
ಮೌನವೂ ಈಗ ನಗರದಲ್ಲಿ ಮೌನಾಚರಣೆಗೆ ಇಳಿದಿದೆ,
ಕೇಳದ ಶಬ್ಧಗಳೆಲ್ಲವೂ ಈಗ ನಗರಗಳಿಂದ ದೂರವೇ ಉಳಿದಿದೆ.

ಸರಾಗವಲ್ಲ ಈಗ ಮೌನದ ಪಯಣ,
ನಗರಗಳಲ್ಲೀಗ ಉಳಿದಿವೆ ಕೆಲವೇ ಶಬ್ಧಗಳ ದಿಬ್ಬಣ.
ಕೇಳದ ಶಬ್ಧಗಳೆಲ್ಲ ಈಗ ಹಳ್ಳಿಗಳ ಪಾಲು,
ನಗರಗಳಲ್ಲಿ ಉಳಿದಿರೋದು ಇನ್ನು ಬರೀ ಸದ್ದಿನ ಧೂಳು.

ಹಳ್ಳಿಗಳಲಿ ಮರ, ಗಾಳಿ, ಎಲೆಗಳು ನುಡಿದಿವೆ,
ತೆನೆ, ನೀರು, ಬೆಳಕು ಜೊತೆಗೂಡಿವೆ.
ಕೇಳದ ಶಬ್ಧಗಳೆಲ್ಲ ಈಗ ನಗರಗಳಿಂದ ದೂರ,
ನಮ್ಮ ಜೀವನದ ಸದ್ದುಗಳೇ ಈಗ ನಮ್ಮ ಮನಸ್ಸಿಗೆ ಭಾರ.

- ಆದರ್ಶ