ತುಂಬಾ ಗಹನ ನನ್ನ ಪ್ರೀತಿ,
ಜಗತ್ತಿನ ಕೊನೆಯ ದಾರಿಯ ರೀತಿ.
ಆಚೀಚೆ ನೋಡುವ ಅವಕಾಶವಿಲ್ಲ,
ತಾನಾಗೆ ಆವರಿಸಿ ನಿಂತಿದೆ ಪ್ರೀತಿಯು ನನ್ನ ಸುತ್ತೆಲ್ಲ.

ಹಾಸ್ಯವೇ ಇಲ್ಲದ ಹಸನಾದ ಪ್ರೀತಿ,
ಹುರುಪಲಿ ಹರಿಯುವುದೆಂಬ ನಯವಾದ ಭೀತಿ.
ಮೀಟುತಿಹುದು ಹೃದಯದಿ ಭಾವನಾ ತಂತಿ,
ತುಂಬಾ ಗಹನವಾದದ್ದು ನನ್ನ ಪ್ರೀತಿ.

ಅಚ್ಚರಿಯೇ ಇಲ್ಲ ಅಚ್ಚಳಿಯದಿದು,
ಮನದಾವರಣದಿ ಅಂಕುಷಕ್ಕೆ ಸಿಲುಕದ್ದು.
ಬದಲಾವಣೆಗೆ ಬಾರದು ನನ್ನ ಪ್ರೀತಿ,
ಎಲ್ಲಕ್ಕೂ ಗಹನವಾದ ವಿಷಯದ ರೀತಿ.

- ಆದರ್ಶ