ನಿನ್ನ ಕಂಕಳಿನ ಬೆವರು, ನನ್ನ ಭುಜದ ಮೇಲೆ..
ಹಿಮ್ಮಡಿ ಮೇಲೆ ಮಾಡಿ, ಹೆಬ್ಬೆರಳ ಮೇಲೆ ನೀ ನಿಂತೆ,
ಕಣ್ಣುಗಳು ಸೇರುವ ಮೊದಲೇ, ತುಟಿಗಳಿಗೆ ಒಂದಾಗುವ ಚಿಂತೆ..

ಅದಲು ಬದಲು ಆಗಬೇಕಿರುವುದು, ಮನಸ್ಸೊಂದೇನಾ ಸದ್ಯಕ್ಕೆ?,
ಹಸಿದು ಕುಂತವನ ಮುಂದೆ ವೇದಾಂತ ಯಾತಕೆ?..
ಕಣ್ಣಲ್ಲೇ ಮಾತು ಸಾಕು, ಸ್ವಲ್ಪ ನಾವು ಮುಂದುವರೆಯಬೇಕು,
ಬರೀ ಕೈ ಕಿರುಬೆರಳುಗಳಲ್ಲ, ಎರಡೆರಡು ಕೈಗಳು ಒಂದಾಗಬೇಕು..!

ನಾನೇ ಸೋತೆ, ನೀನೇ ಗೆದ್ದೆ, ಕತ್ತಲಲ್ಲಿ ಮೊಳಗಲಿ ನಿನ್ನ ಕೈ ಬಳೆ, ಕಾಲ್ಗೆಜ್ಜೆಯ ಶಬ್ಧ..
ನೀ ಉಸಿರಾಡಿ ಬಿಟ್ಟ ಉಸಿರು, ನನ್ನ ಉಸಿರಾಗಿತ್ತು
ನಿನ್ನ ತುಟಿ ಮೇಲಿದ್ದ ರಂಗು ತುಂಬಾ ರುಚಿಯಾಗಿತ್ತು..!

ನೀ ಏನೇ ಹೇಳು ಸ್ವಲ್ಪ ಎಡವಟ್ಟು ನಾನು, ಸರಿ ಮಾಡಬೇಕಾದವಳು ನೀನು..
ತುಸು ಸಿಟ್ಟು ನನಗೆ, ಹುಬ್ಬು ಗಂಟಿಕ್ಕಿರುವೆ,
ತಬ್ಬಿ ನೋಡು ಒಮ್ಮೆ, ನಾ ಮತ್ತೆ ಕರಗುವೆ..!

– ದೀಪಕ್ ಬಸ್ರೂರು