ಮಾತನಾಡದೆ ಉಳಿದ ಭಾವನೆಗಳು ನೂರು,
ವ್ಯಕ್ತಪಡಿಸದಂತೆ ನನ್ನ ತಡೆದು ಹಿಡಿದೋರು ಯಾರು?
ಹರಿಯುವ ನದಿಗೆ ಒಡ್ಡನ್ನು ಯಾರೋ ಕಟ್ಟುವರು,
ನನ್ನ ಮನವ ಹಿಡಿದು ಕಟ್ಟಿದ ಮೌನಕೆ ನಿನ್ನದೇ ಹೆಸರು.

ಕಾಡದೆ ಉಳಿಯುವ ನೆನಪುಗಳು ನೂರು,
ದಾರಿಯಲ್ಲಿಯೇ ಮರೆಯಾಗುವವು ಹರುಷಗಳ ಊರು.
ಕನಸಲ್ಲಿ ನನ್ನ ಕಾಡುವ ಕಲ್ಪನೆಯೇ ನೀನು,
ಸರಾಗವಾಗಿ ನಿನ್ನ ರೂಪವ ಸೃಷ್ಟಿಸಿದವನು ನಾನು.

ನನ್ನ ದಾರಿಯಲ್ಲಿ ಈಗ ಭಾವನೆಗಳು ನೂರು,
ಎಲ್ಲಕ್ಕೂ ನಿನ್ನಯ ಹೃದಯವೇ ತೇರು.
ತಲುಪದೇ ಇರದೇ ನಿನ್ನಯ ಊರು,
ನನ್ನ ಮನಸ್ಸಲ್ಲಿ ಈಗ ಭಾವನೆಗಳು ನೂರು.

- ಆದರ್ಶ