ಸಂತೇಲಿ ಸುಮ್ಮನೆ ನಿಂತು ಸುತ್ತ ನೋಡುವಂಥ ಸಂಯಮ
ಜಾತ್ರೆಯಲ್ಲೂ ನಿಧಾನವಾಗಿ ನಡೆಯುವಂಥ ಸಂಯಮ
ಮಾನಸ ಧರೆಯೊಳಗಿನ ಕ್ಷೋಭೆಯನ್ನೇ ತಣಿಸುವಂಥ ಸಂಯಮ
ಕನಸ ಕ್ರೂರ ಕಿರುಚಾಟವನ್ನು ಮರೆಸುವಂಥ ಸಂಯಮ
ಸಂಯಮ ಬೇಕು ಸಂಯಮ
ಮುಗ್ಧ ಮನಸ್ಸಿನ ಮೌನದ ಮಾತನ್ನು ಆಲಿಸಲು ಕಿವಿಯಾಗುವಂಥ ಸಂಯಮ!


- ಆದರ್ಶ