ಹರಳುಗಣ್ಣಿನ, ಮೃದುವಾದ ನಗುವಿನ,
ಸರಳ ಚೆಲುವೆ ನನ್ನ ಹುಡುಗಿ,
ಮುದ್ದಾದ ಮೌನ, ಮಾತಲ್ಲಿ ಗಾನ,
ನಲಿಯುತಿವೆ ಅವಳ ಮನದಲ್ಲಿ ಅಡಗಿ!

ವೈಯ್ಯಾರದ ನಡಿಗೆಯಿಲ್ಲ, ತೋರಿಕೆಯ ಅಲಂಕಾರವಿಲ್ಲ,
ನಡು ಹಣೆಗೆ ಇಡುವಳು ಬೊಟ್ಟು,
ಸೂರ್ಯನ ಹೊಳಪಿಗೆ ದೃಷ್ಟಿಯಾಗುವಷ್ಟು!
ಪಿಸುದನಿಯ ಒಡತಿಯು,
ನುಡಿದಾಗ ಮಳೆಯೇ ಸುರಿದಂತೆ ಅನುಭವವು,
ಮಾತಿನ ಝೇಂಕಾರಕೆ ಸೇರಿದೆ ಮೌನದ ಅಲಂಕಾರ,
ಪ್ರತಿ ಗುಣದಲು ಬೆರೆತಿರುವುದು ಪ್ರೇಮದ ಸಾರ!

ಮೃದು ಮಾತಿನ ಬೆಡಗಿ, ನನ್ನ ಹುಡುಗಿ!
ಮುದ್ದಾದ ಮೌನ, ಮಾತಲ್ಲಿ ಗಾನ,
ನಲಿಯುತಿವೆ ಅವಳ ಮನದಲ್ಲಿ ಅಡಗಿ!


- ಆದರ್ಶ