ಏನೀ ಹುಡುಕಾಟ, ಏತಕ್ಕಾಗಿ ತಡಕಾಟ
ಗುರಿ ಎಲ್ಲೋ ಕಂಡಂತಾಗುವುದು
ಮರುಕ್ಷಣವೇ ಮರೆಯಾದಂತಾಗುವುದು.

ನೂರು ಖುಷಿಗಳಿದ್ದರೂ ಮನದಲ್ಲಿದೆ ಮೌನ
ಹಳೇ ನೆನಪುಗಳ ಎಡಬಿಡದೆ ಧ್ಯಾನ,
ಕನಸುಗಳು ಕಣ್ತುಂಬಿವೆ ಬೆಳೆಯಲು ಎತ್ತರ
ಏಕೋ ಸಿಗದಾಗಿದೆ ಯಾವುದಕ್ಕೂ ಉತ್ತರ.

ಹುಡುಕ ಬಲ್ಲೆನೇ ನಾ ಆ ಕಾಣದಿರುವ ಹಾದಿಯ?
ಏರಬಲ್ಲೆನೇ ಆ ನಾವಿಕನಿಲ್ಲದ ದೋಣಿಯ?
ಏನನ್ನು ಹಂಬಲಿಸಿದೆ ಈ ನನ್ನ ಮನ,
ಹುಡುಕುತಿದೆ ಅದ ಈ ನನ್ನ ಮೌನ

- ಸೌಮ್ಯ ಪುರದ್