ನೆನಪ ಹರಿದು ಮನಸ್ಸ ಕೊರೆದು ತನಿಖೆ ನಡೆಸೋ ಭೀಕರತೆ
ಎದುರು ನಿಂತರು ನಿನ್ನ ಗುರುತಿಸದ ಪ್ರೀತಿಯ ಅತೀವ ಕ್ರೂರತೆ,

ಅರಳುವ ಹೂವನ್ನು ಕಾಲಲ್ಲಿ ತುಳಿಯುವ ನಿನ್ನಯ ಮನಸ್ಸಿದು ಕಠೋರ
ಪ್ರೀತಿಯ ಅರಿಯದೆ ಬಾಳುತಿರುವ ನಿನ್ನಯ ನೆನಪೇ ನನಗೆ ಅಘೋರ,
ದೇವರ ಸನಿಹವ ಬಯಸುವ ಭಾವನೆ ತರಿಸಿದೆ ನನ್ನಯ ಮನಸ್ಸಿಗೆ
ಪ್ರೀತಿಯು ಸಿಗದಿನ್ನು ಎನ್ನುವ ಸತ್ಯವ ತಿಳಿಸಿ, ತಳ್ಳಿರುವೆ ಎಂದೂ ಮುಗಿಯದ ನಿದಿರೆಗೆ!

- ಆದರ್ಶ