ಸುಖಾಂತ್ಯ ಎಂಬುದು ಸಾವು ಒಂದೆ,
ಹೊಗೆಯನ್ನು ಹಾಕಿದಾಗ ಮನೆಯ ಮುಂದೆ,

ಅಡೆತಡೆಗಳೆಲ್ಲ ಮೀರಿ ಈ ಜಗವನು ನೀ ದಾಟು,
ಮೆರವಣಿಗೆಯಲಿ ಬೀಳುತ್ತಿರಲಿ ತಮಟೆಯ ಏಟು,
ಬದುಕಿನ ಆಚೆ ಎಲ್ಲೋ ಇರುವುದು ಸ್ವರ್ಗದ ಗುರುತು,
ಅದನ್ನ ಕಂಡು ಅನುಭವಿಸಿದವರು ಯಾರು ಸತ್ತವರ ಹೊರತು,
ಎಲ್ಲ ಸಂಬಂಧಗಳ ಋಣವು ಮುಗಿದಿದೆ ಇನ್ನು,
ಕೂಡಿಟ್ಟಿದ್ದೆಲ್ಲವ ಬಿಟ್ಟು ಜೊತೆಗೆ ಉಳಿದಿರುವುದು ಈ ನೆಲದ ಮಣ್ಣು,

ಸುಖಾಂತ್ಯ ಎಂಬುದು ಸಾವು ಒಂದೆ,
ಜನರೆಲ್ಲ ಕುಣಿಯುತ್ತಿರಲು ನಿನ್ನ ಕೊನೆಯ ಮೆರವಣಿಗೆಯ ಮುಂದೆ!


- ಆದರ್ಶ