ತುಂಬ ಒಳ್ಳೆಯವನಾಗಿದ್ದು ಸಾಕಾಗಿದೆ ಮನಕೆ
ನಿನ್ನೊಂದಿಗೆ ಇನ್ಮೇಲೆ ಪೋಲಿಯಾಗುವ ಬಯಕೆ!


ಒಂಟಿಯಾಗಿ ಕಾಡಲ್ಲಿ ಅಲೆಯುವ ಬಾರೆ,
ನಮ್ಮನ್ನು ಇನ್ನು ತಡೆಯೋರು ಯಾರೆ?
ದೂರದಿ ನಿಂತು ಮಾತಾಡುವುದು ಯಾಕೆ,
ಇನ್ಮೇಲೆ ಹತ್ತಿರ ಕುಳಿತು ಪೋಲಿಯಾಗುವ ಬಯಕೆ!


ಭಯವೇಕೆ ಈಗ ಹೇಳಾಗಿದೆ ಜಗಕೆ
ಬೆರಗಾಗಿ ನಿಲ್ಲಲಿ ಜಗವು ನಮ್ಮ ತುಂಟಾಟಕೆ,
ಇನ್ನೇಕೆ ತಡವು ಬಾ ನನ್ನ ಸನಿಹಕೆ
ನಿನ್ನೊಂದಿಗೆ ಇನ್ಮೇಲೆ ಪೋಲಿಯಾಗುವ ಬಯಕೆ!


- ಆದರ್ಶ