ಮಾತು ಸನಿಹವೆ ನಿನಗೆ, ನಿನ್ನ ಮೌನ ಸನಿಹವೆ,
ನಿನ್ನ ಮೌನದಲ್ಲಿ ಮಾತು ಕೇಳುವ ನಿನಗೆ ನಾನೇ ಸನಿಹವೆ?

ದಾರಿ ಸನಿಹವೆ ನಿನಗೆ, ನಿನ್ನ ಗುರಿಯು ಸನಿಹವೆ,
ನಿನ್ನ ದಾರಿಯಲ್ಲಿ ಜೊತೆಯಾಗಿ ನಿನ್ನ ಗುರಿಗೆ ಬರುವ ನಾನೇ ಸನಿಹವೆ?

ಬೆಳಕು ಸನಿಹವೆ ನಿನಗೆ, ಇಲ್ಲ ಕತ್ತಲು ಸನಿಹವೆ,
ಬೆಳಕಾಗಲಿ ಕತ್ತಲಾಗಲಿ ನಿನ್ನ ಕೂಡಿ ಇರುವ ನಾನೇ ಸನಿಹವೆ?

ಲೋಕ ಸನಿಹವೆ ನಿನಗೆ, ಇಲ್ಲ ಏಕಾಂತ ಸನಿಹವೆ,
ಏಕಾಂತದಲೂ ನಿನ್ನ ಲೋಕವಾಗಿರುವ ನಿನಗೆ ನಾನೇ ಸನಿಹವೆ?

ಸ್ನೇಹ ಸನಿಹವೆ ನಿನಗೆ, ಇಲ್ಲ ಪ್ರೀತಿ ಸನಿಹವೆ,
ಸ್ನೇಹದಲ್ಲೂ ಪ್ರೀತಿ ತೋರುವ ನಿನಗೆ ನಾನೇ ಸನಿಹವೆ?

ಬದುಕು ಸನಿಹವೆ ನಿನಗೆ, ಇಲ್ಲ ಮರಣ ಸನಿಹವೆ,
ಮರಣದಲ್ಲೂ ಬದುಕ ತೋರುವ ನಿನಗೆ ನಾನೇ ಸನಿಹವೆ,
ನಿನಗೆ ನಾನೇ ಸನಿಹವೆ?

- ಆದರ್ಶ