ಹೂವ ಚೆಲ್ಲಿ, ತಿಲಕವಿಟ್ಟು, ಆರತಿ ಮಾಡಿ ಬಾ ಎಂದಾಗ ಪ್ರೀತಿ ಬಂದಿತ್ತೆ?
ಒಣಗಿದ ನೆಲದ ಮೇಲೆ ಬೀಸುವ ಗಾಳಿಯು ಮುಂಗಾರನ್ನು ಎಂದಾದರೂ ತಂದಿತ್ತೆ?

ಬೇಗೆಯಲ್ಲಿ ಭಾವನೆ ಕರಗಬೇಕು, ಆವಿಯಾಗಿ ಮನಮುಗಿಲ ಮುಟ್ಟಬೇಕು;
ತಡೆಗಟ್ಟಿ ಹಿಡಿದ ಕಪ್ಪಾದ ಮುಗಿಲೇ ಮಳೆಯಾಗಿ ಸುರಿವುದು,
ಗುಣಗಳ ಅರಿತ ಸೊಂಪಾದ ಮನದಲ್ಲೇ ಪ್ರೀತಿ ಚಿಗುರುವುದು!


ಮದುವೆ ಆಗಿ ಬಹಳಷ್ಟು ವರುಷ ಜೊತೆಗಿದ್ದೂ ಸಹ ಒಬ್ಬರೊನ್ನೊಬ್ಬರ ಅರಿಯದೆ, ಕಷ್ಟ ಪಟ್ಟು ಜೊತೆಗಿರುವ ಹಾಗೆ ಇದ್ದವರ ನೋಡಿದಾಗ ಈ ಕವನದ ಯೋಚನೆ ಬಂತು.
ಇಲ್ಲಿ ಪ್ರೀತಿ ಮೂಡುವುದನ್ನ ಜಲಚಕ್ರದಲ್ಲಿ ನೀರು ಆವಿಯಾಗಿ ಮತ್ತೆ ಮಳೆಯಾಗುವ ಕ್ರಿಯೆಗೆ ಹೋಲಿಸಿ ಬರೆಯೋ ಪ್ರಯತ್ನ ಮಾಡಿದ್ದೀನಿ.

-ಆದರ್ಶ