ಕಗ್ಗತ್ತಲು
by Adarsha
ಬೆಳಕನು ಆವರಿಸುವ ಕಗ್ಗತ್ತಲು, ಕರೆದುಕೊಂಡು ಸಾಗಿದೆ ಕಾಣದ ಹಾದಿಯಲಿ, ಇಂದು ನಮ್ಮ ಗುರಿಯೇ ಬದಲು!
ಶುರುವಾದ ದಾರಿಯೂ ಈಗ ಇರದಾಗಿದೆ, ಆ ದಾರಿಗೂ ಏರಿತೇ ಅಮಲು?
ನಡುವಾದ ದ್ವೀಪದಲ್ಲಿ ನಿಂತು ನೋಡುತಿರೆ ಸುತ್ತಲೂ ಆವರಿಸಿದೆ ಭೀಕರ ಅಲೆಗಳ ನರ್ತನ
ಕಾಲಿಡಲು ಆಗುವುದೇ? ಈಜಲು ಇಳಿಯಬಹುದೇ? ತೇಲುವುದೇ ಈ ಸಣ್ಣದಾದ ಜೀವನ?
ಯುಗಗಳಿಂದ ಕತ್ತಲೆಯಲ್ಲಿ ಮರೆಯಾದವು ಅದೆಷ್ಟೋ ಬದುಕುಗಳು,
ಕಾಣದ ಹಾದಿಯ ಕಟುವಾದ ಪಯಣದಲಿ ಕಣ್ಮುಚ್ಚಿದವು ಬೆಳಕೇ ಕಾಣದ ಕಣ್ಣುಗಳು
ಸೋತಿದೆ ಇಂದು ಆಶೆಯ ಬಿಂದು ಬೆಳಕ ಹರಿಸಿಬಿಡಲು,
ಬೆಳಕನು ಆವರಿಸುವ ಕಗ್ಗತ್ತಲು, ಕರೆದುಕೊಂಡು ಸಾಗಿದೆ ಕಾಣದ ಹಾದಿಯಲಿ, ಇಂದು ನಮ್ಮ ಗುರಿಯೇ ಬದಲು!
- ಆದರ್ಶ