ಒಂದು ಹೆಜ್ಜೆ ನನ್ನೆಡೆಗೆ ನೀನಿಟ್ಟರೆ ನಿನಗಾಗೆ ಎರಡು ಹೆಜ್ಜೆಯ ನಾ ಇಡುವೆ,
ಜೊತೆಯಲ್ಲಿ ಬಾ ಎಂದು ಕರೆಯದಿದ್ದರೂ ನಿನ್ನೊಡನೆ ಅನುಗಾಲ ನಾನಿರುವೆ;
ಗಾಳಿ-ಮೋಡವು ಎಲ್ಲವ ಮೀರಿ ಹಾರಿ ಬೀಗಿದರೇನಂತೆ,
ನಮ್ಮಯ ಸ್ನೇಹ ಹಾರುವುದು ನೋಡು ಗಾಳಿಯ ಹಿಡಿತಕೂ ಬಾರದಂತೆ;

ಒಂದು ಸಜ್ಞೆ ನೀ ಕೊಟ್ಟರೆ ನನಗೆ, ಬರುವೆನು ಎಲ್ಲವ ತೊರೆದು,
ಒಂದು ಹೆಜ್ಜೆ ನನ್ನೆಡೆಗೆ ನೀನಿಟ್ಟರೆ ನಿನಗಾಗೆ ಎರಡು ಹೆಜ್ಜೆಯ ನಾ ಇಡುವೆ, ಎಲ್ಲ ಅನುಮಾನಗಳ ಮುರಿದು!

-ಆದರ್ಶ