ಮರವೊಂದು ಬಳ್ಳಿಯಿಂದ ಬೇರಾಗಬಂದಾಗ
ಬಳ್ಳಿಯು ದೂರ ಸರಿದು ಮತ್ತೆಲ್ಲೋ ನಿಲ್ಲಬೇಕಾಗ,
ಮರದ ಮನದಲ್ಲಿ, ಬಳ್ಳಿಯ ಒಡಲಲ್ಲಿ ಮೂಡಿಬಂದದ್ದು ನಾ; ಅರಿಯದಂಥ ನೋವು!

ಮರಿಯೊಂದು ಗೂಡನ್ನು ತೊರೆದು ಬರುವಾಗ
ತಾಯಿಯು ಕಂಬನಿ ಸುರಿಸಿ ನೋಡುತಿರುವಾಗ
ಮರಿಯ ಭಯದಲ್ಲಿ, ತಾಯಿಯ ಕರುಳಲ್ಲಿ ಬೆರೆತುಬಂದದ್ದು ನಾ; ಅರಿಯದಂಥ ನೋವು!

ಬೆಳೆದು ಬಂದ ಹಾದಿಯ ಜಾಡನ್ನು ತಾನೇ ಅಳಿಸಿ
ಕಾಣದ ಹೊಸ ಹಾದಿಯ ಸೊಗಸನ್ನು ಅರಸಿ
ನಡೆದಿದ್ದ ಹಾದಿಯ ನೆನಪಲ್ಲಿ, ಕಾಣದಂಥ ಹಾದಿಯ ಮೆರುಗಲ್ಲಿ; ಇರುವುದು ನಾ ಅರಿಯದಂಥ ನೋವು!

- ಆದರ್ಶ

ಸ್ನೇಹಿತೆಯ ಮದುವೆಗೆಂದು ಹೋಗಿದ್ದಾಗ, ಅವಳು ತನ್ನ ತವರು ಮನೆಯಿಂದ ಗಂಡನ ಮನೆಗೆ ಹೋಗುವಾಗ ಬಂದ ಯೋಚನೆ!
ನಾನು ಏನೇ ಮಾಡಿದ್ರೂ ಒಬ್ಬಳು ಹುಡುಗಿ ತನ್ನ ಮನೆ ಬಿಟ್ಟು ಇನ್ನೊಂದು ಮನೆಗೆ ಹೋಗುವಾಗ, ಆಕೆಗೆ ಆಗುವ ದುಃಖ ನನಗೆ ತಿಳಿಯುವುದಿಲ್ಲ ಅಂತ.
ಇದು ಆ ಘಳಿಗೆಯಲಿ ಬಂದ ಕವಿತೆ