ಅಂತ್ಯದಲ್ಲಿ ನಡುಗುವುದು ಯುಗಗಳಿಂದ ನಿಂತಿದ್ದ ಗೋಪುರ,
ಅದರಡಿಯಲ್ಲಿ ಕಳೆದು ಹೋಗುವುದು ನಮ್ಮಯ ಪ್ರವರ;

ಸಮಯದ ಸ್ಪರ್ಶಕೆ ಮಾಸದೆ ಉಳಿವುದೇ ಬಣ್ಣವು,
ಅದೆಷ್ಟು ವರುಷ ತಡೆದು ನಿಲ್ಲುವುದು ಯುದ್ಧ ನಿರತ ಮನವು?
ಎಂದಾದರೂ ಚಿಗುರಲೇಬೇಕು ಶಾಂತಿಯಿಂದ ಹೂವು,
ಅದರ ಕಂಪಲ್ಲೇ ಮರೆಯಾಗಬೇಕು ಯುದ್ಧ ತಂದ ಸಾವು.

ಅಂತ್ಯದಲ್ಲಿ ನಡುಗುವುದು ಯುಗಗಳಿಂದ ನಿಂತಿದ್ದ ಗೋಪುರ,
ಅದರಡಿಯಿಂದಲೇ ಏಳುವುದು ನಮ್ಮ ನವಯುಗದ ಪ್ರವರ!


-ಆದರ್ಶ