ಜಗದೋಟ
by Adarsha
ಜಗವೇ ಹಣದ ಹಿಂದೆ ಓಡುತಿರುವಾಗ
ನದಿ ಇದು ಓಡಿದೆ ನೋಡು ಸಾಗರವ ಸೇರಿ ಹಿರಿದಾಗಲು,
ಓಡಿದೆ ತಾನು ಜಗತ್ತನ್ನೇ ನೋಡಲು.
ಜಗವೇ ಹಣದ ಹಿಂದೆ ಓಡುತಿರುವಾಗ
ಗಾಳಿ ಇದು ಓಡಿದೆ ನೋಡು ಜಗತ್ತನ್ನೇ ಆವರಿಸಲು,
ಓಡಿದೆ ತಾನು ಪ್ರತಿ ಜೀವವನ್ನು ಉಳಿಸಲು.
ಜಗವೇ ಹಣದ ಹಿಂದೆ ಓಡುತಿರುವಾಗ
ಬೆಳಕಿದು ಓಡಿದೆ ನೋಡು ಜಗದ ಚಿತ್ರವ ಬಿಡಿಸಲು,
ಓಡಿದೆ ತಾನು ಎಲ್ಲದರ ಕಣ್ಣ ಬೆಳಗಿಸಲು.
ಜಗವೇ ಹಣದ ಹಿಂದೆ ಓಡುತಿರುವಾಗ
ಮನವಿದು ಓಡಿದೆ ನೆಮ್ಮದಿಯ ಪಡೆಯಲು,
ಓಡಿದೆ ತಾನು ಅಲ್ಪಕ್ಕೆ ತೃಪ್ತಿಯ ಕಾಣಲು.
ಜಗವೇ ಹಣದ ಹಿಂದೆ ಓಡುತಿರುವಾಗ
ಹಸಿವಿದು ಓಡಿದೆ ತುತ್ತನು ಕಾಣಲು,
ಓಡಿದೆ ತಾನು ಒಂದು ತುತ್ತಲ್ಲೇ ಸಂತೃಪ್ತವಾಗಲು!!
- ಆದರ್ಶ