ಮಳೆಯಲ್ಲಿ ನಾನು ನೆನಪುಗಳ ಜೊತೆಯಲ್ಲಿ ನೆನೆದಾಗ
ತಂಗಾಳಿ ಬೀಸಿದರು ನನ್ನ ಏಕಾಂತ ಬಿಡದಾಗ
ಸೂರ್ಯ ಬರುವನು ಬೆಚ್ಚಗೆ, ನನಗೆ ನೀಡುವನು ಅಪ್ಪುಗೆ

ಜಗವೆಲ್ಲ ನಿರ್ಜೀವದೆ ನಿತ್ಯ ಇರುಳ ಕಳೆವಾಗ
ನೂರಾರು ತಾರೆಗಳ ಜೊತೆ ನನಗೆ ಸಾಲದಾದಾಗ
ಸೂರ್ಯ ಬರುವನು ಬೆಚ್ಚಗೆ, ನನಗೆ ನೀಡುವನು ಅಪ್ಪುಗೆ

ಜೀವನದಲ್ಲಿ ನನ್ನ ದಾರಿಯು ಕಿರಿದಾಗಿ ಹೋದಾಗ
ಸಣ್ಣ ಬೆಳಕೂ ನನ್ನ ಕಣ್ಣಿಗೆ ಕಾಣದೆ ಇದ್ದಾಗ
ಸೂರ್ಯ ಬರುವನು ಬೆಚ್ಚಗೆ, ನನಗೆ ನೀಡುವನು ಅಪ್ಪುಗೆ

- ಆದರ್ಶ