ಫಿಲ್ಮ್ ರಿಲೀಸ್ ಅಂತೆ..,ಥೀಯೇಟರ್ ಹೌಸ್ಫುಲ್ ಅಂತೆ..
ಜನಾನೋ ಜನ ಅಂತೆ..,ಸಿಕ್ಕಾಪಟ್ಟೆ ಕಲೆಕ್ಷನ್ ಅಂತೆ..
ಓಡ್ತಂತೆ ಓಡ್ತಂತೆ ಓಡ್ತಂತೆ…
ಪಾಪ ಪ್ರೊಡ್ಯುಸರ್ ಸಾಲ ತೀರ್ಸೊಕೆ ಆಗದೆ ಓಡೋದ್ನಂತೆ….
ನಂಗೊತ್ತಿಲ್ಲಪ್ಪ.. ಎಲ್ಲಾ ಉಳಿದವರು ಕಂಡಂತೆ….

ಮನೆ ಆಚೆ ಕಟ್ಟಾಕಿದ್ದ ನಾಯಿ ಬೊಗಳುತ್ತ ಇತ್ತಂತೆ..
ಅವನು ಆಚೆ ಬಂದ್ನಂತೆ..ತಿನ್ನೋಕೆನೋ ಹಾಕಿದ್ನಂತೆ..
ನಾಯಿ ಸುಮ್ಮನಾಯ್ತಂತೆ.. ಮನೆ ಒಳಗೆ ಹೋಗ್ತಾನಂತೆ..
ಹೆಂಡತಿ ಯಾವ್ದೋ ವಿಷಯಕ್ಕೆ ಕೂಗಡ್ತಾ ಇದ್ಳಂತೆ..
ಮತ್ತೆ ಅವನು ಆಚೆ ಬಂದು ನಾಯಿಗೆ ಎರಡು ಬಿಟ್ನಂತೆ..
ನಾಯಿ ಹೆಂಡತಿಗಿಂತ ಜೋರಾಗಿ ಕೂಗೋಕೆ ಶುರು ಮಾಡ್ತಂತೆ..
ಈಗ ಒಳಗೆ ಬಂದು ತಣ್ಣಗೆ ಪೇಪರ್ ಓದ್ಕೊಂಡು ಕೂತುಕೊಂಡನಂತೆ…
ಏ.. ನಂಗೊತ್ತಿಲ್ಲಪ್ಪ.. ಎಲ್ಲಾ ಉಳಿದವರು ಕಂಡಂತೆ….

ಒಬ್ಬರನ್ನ ಒಬ್ಬರು ನೋಡಿದ್ರಂತೆ..ನಕ್ಕಿದ್ರಂತೆ..
ಪ್ರೀತಿ ಶುರು ಆಯ್ತಂತೆ..
ಪಾರ್ಕ್ ಅಂತೆ, ಸಿನಿಮಾ ಅಂತೆ, ಹೋಟೆಲ್ ಅಂತೆ..
ಕೈ ಕೈ ಹಿಡ್ಕೊಂಡ್ ತಿರುಗಾಡಿದ್ದೋ ತಿರುಗಾಡಿದ್ದಂತೆ..
ಒಬ್ಬರನ್ನ ಒಬ್ಬರು ಬಿಟ್ಟು ಇರೋಕೆ ಆಗ್ತ ಇರಲಿಲ್ವಂತೆ..
ಸದ್ಯಕ್ಕೆ ಇಬ್ಬರಿಗೂ ಮದುವೆ ಅಂತೆ..
ಅವಳದ್ದು ಸೆಪ್ಟೆಂಬರ್ ನಾಲ್ಕಕ್ಕಂತೆ,ಇವನದ್ದು ಅಕ್ಟೋಬರ್ ಎರಡಕ್ಕಂತೆ..
ನಂಗೊತ್ತಿಲ್ಲಪ್ಪ.. ಎಲ್ಲಾ ಉಳಿದವರು ಕಂಡಂತೆ….

ಆ ಮುದುಕ ಹಲ್ಲು ನೋವು ಅಂತ ಕೂಗಿದ್ನಂತೆ..
ಯಾವದೋ ಹೀರೋಯಿನ್ ಆಕಾಶದಿಂದ ಉದುರಿ ಬಿದ್ಳಂತೆ..
ನಿಮ್ಮ ಪೇಸ್ಟಿನಲ್ಲಿ ಉಪ್ಪುಇದೆಯಾ ? ಕೇಳಿದಳಂತೆ..ಇವನು ಇಲ್ಲ ಅಂದನಂತೆ..
ನಿಮ್ಮ ಪೇಸ್ಟಿನಲ್ಲಿ ನಿಂಬೆ ಇದೆಯಾ ? ಕೇಳಿದಳಂತೆ..ಇವನು ಇಲ್ಲ ಅಂದನಂತೆ..
ಅವಳಿಗೂ ಸಿಟ್ಟತ್ತೋಗಿ ನಿಮ್ ಮನೆಯಲ್ಲಿ ಕೊನೆ ಪಕ್ಷ ಪೇಸ್ಟ್ಆದ್ರು ಇದೆಯಾ ಕೇಳಿದಳಂತೆ
ಹಲ್ಲೆ ಇಲ್ಲ, ಪೇಸ್ಟ್ ತಗೊಂಡ್ ಏನ್ಮಾಡ್ಲಿ ಅಂದನಂತೆ,
ಹಲ್ಲು ಸೆಟ್ಟು ತೆಗೆದು ಅವಳ ಕೈಗೆ ಕೊಟ್ನಂತೆ….
ನಂಗೊತ್ತಿಲ್ಲಪ್ಪ.. ಎಲ್ಲಾ ಉಳಿದವರು ಕಂಡಂತೆ..

– ದೀಪಕ್ ಬಸ್ರೂರು