ಅನುದಿನದ ಹುಡುಕಾಟಕ್ಕೆ ಕೊನೆ ನನ್ನ ಅಂತ್ಯ
ಅನುಗಾಲದ ಬೇಡಿಕೆಯ ಈಡೇರಿಸುವ ಅಂತ್ಯ
ಸಾಗುವ ನದಿಯು ಸೇರುವ ಅಂತ್ಯ
ಕಾಣದ ದಾರಿಯ ಪಯಣದ ಅಂತ್ಯ
ಸೊಗಸಾದ ಭಾವನೆಗೆ ಪ್ರೇರಣೆ ಅಂತ್ಯ
ಹಿತವಾದ ಹೂಕನಸ ಧೋರಣೆ ಅಂತ್ಯ
ಮರುಗುವ ಜೀವಕೆ ಮುದ ತರಿಸುವ ಅಂತ್ಯ
ಮರಣ ಸನಿಹದಲು ಬದುಕ ತೋರಿಸುವ ಅಂತ್ಯ
ನನ್ನೆಲ್ಲ ಏಕಾಂತಕ್ಕೆ ಕೊನೆ ನನ್ನ ಅಂತ್ಯ
ನನ್ನೆಲ್ಲ ಹುಡುಕಾಟವೇ ನೀ ನನ್ನ ಅಂತ್ಯ, ನನ್ನ ಅಂತ್ಯ!


- ಆದರ್ಶ

ಈ ಕವನವನ್ನು ಧ್ವನಿ ರೂಪವನ್ನು ಇಲ್ಲಿ ಕೇಳಬಹುದು