ಅಚ್ಚಕನ್ನಡ
ಕನ್ನಡದ ನಿತ್ಯ ಉತ್ಸವ
-
ಶ್ರೋಡಿಂಗರ್ ನ ಬೆಕ್ಕು
ಸಾವಿರಾರು ವರುಷಗಳ ಮನುಷ್ಯರ ಇತಿಹಾಸದಲ್ಲಿ, ಬಹಳ ವಿಧವಾದ ಜನರು, ಮನಸ್ಸುಗಳು ಬಂದು ಹೋಗಿವೆ. ಬಹಳ ರೀತಿಯ ಯೋಚನೆಯ ಅಲೆಗಳು ಬಂದು ಹೋದಂತೆ, ಬಹಳ ವಿಧವಾದ ಚಳುವಳಿಗಳೂ ಸಹ ನಡೆದಿದ್ದಾವೆ. ಮನುಷ್ಯ ಕಲಿತ, ಮರೆತ, ಮತ್ತೆ ಕಲಿತ. ಈ ಕಲಿಕೆ-ಮರೆವುಗಳ ದಾರಿಯಲ್ಲಿ ಬಹಳ ಜಾಣ ಯೋಚನೆಗಳು, ಕೆಲಸಗಳು ಮೂಡಿ ಬಂದಿದ್ದಾವೆ. ಹಾಗೆಯೇ ಬಹಳ ದಡ್ಡತನ ಅನ್ನಿಸುವಂತ ಕೆಲಸಗಳು, ಯೋಚನೆಗಳು ಹೊರ ಬಂದಿದ್ದಾವೆ. ಈ ದಾರಿಯನ್ನ ಒಟ್ಟಾರೆ ತಿರುಗಿ ನೋಡಿದರೆ ಜನರು ಜಾಣರು...
-
ಗಧಾಯುದ್ಧ
ಮಹಾಭಾರತದ ಕೊನೆ ದಿನ, ಅವತ್ತಿನ ದಿನ ಭೀಮ, ದುರ್ಯೋಧನನ ಎತ್ಲಿಲ್ಲ ಅಂದ್ರೆ ದ್ರೌಪದಿ ಮನೆ ಒಳಗ್ ಬಿಟ್ಕಳಲ್ಲ ಅಂತ ಹೇಳಿರ್ತಾಳೆ. ಇವ್ನು ಅವನ ತೊಡೆನ ಬಗದು, ಅವನ ರಕ್ತನ ಶಾಂಪೂ ಮಾಡಿ, ನಿನಗೆ ತಲೆ ಸ್ನಾನ ಮಾಡಿಸ್ಲಿಲ್ಲ ಅಂದ್ರೆ, ನಾನು ಊರು ಬಿಟ್ಟು ಓಡೋಗ್ತಿನಿ ಅಂತ ಹೇಳಿರ್ತಾನೆ. ಆ ಕೊನೆ ದಿನ ಬಂದೆ ಬಿಟ್ಟಿದೆ. ಯುದ್ಧ ಮುಗಿದು, ಉಳಿದ ಕೌರವರೆಲ್ಲ ಹೊಗೆ ಹಾಕುಸ್ಕಂಡವ್ರೆ, ಆದ್ರೆ ದುರ್ಯೋಧನ ಮಾತ್ರ ಎಲ್ಲೂ ಕಾಣ್ತಿಲ್ಲ....
-
ಕನಸು
ಬಾಗಿಲು ಮುಚ್ಚಿ, ಕೋಣೆಯ ಹೊಕ್ಕು, ಕನಸಿನ ದೀಪ ಹಚ್ಚಿ, ಚೆಲ್ಲಿದೆ ಬೆಳಕು. ಇರುಳೆ ಹೊತ್ತಿ ಉರಿದಿದೆ ಈಗ, ತೆಗೆದಾಗ ಕನಸಿನ ಕೋಣೆಯ ಬೀಗ. ಕತ್ತಲೆಯಲ್ಲಿ ಕಂಗಳು ಅರಳಿ, ದಣಿದ ಜೀವಕೆ ಹೊಸತನ ತುಂಬಿದೆ. ನಿದ್ದೆಯಲಿ ಬದುಕಿಗೆ ಎದೆಬಡಿತ ಮರಳಿ, ಮಣಿದ ಮನಸ್ಸಿಗೆ ಸಾಂತ್ವಾನ ಹೇಳಿದೆ. ಎದ್ದಾಗ ಮುಂಜಾನೆ ಲೋಕವೇ ಹೊಸದು, ಹಗಲಿಗೆ ಕನಸೇ ಅಂಕಿತ. ನಡೆದಾಗ ಅನುದಿನವು ದಣಿವೆ ಇರದು, ಹೆಗಲಿಗೇರಿ ನನಸಿನ ಸ್ವಾಗತ - ಆದರ್ಶ
-
ಬೇಸಿಗೆಯ ದಿನ
ಮತ್ತೊಂದು ಬೇಸಿಗೆ ಈ ನನ್ನ ವಯಸ್ಸಿಗೆ ಎಲೆ ಮುದುರಿ ಎಲೆ ಉದುರಿ ಬರಿದಾಗಿದೆ. ಬಂದಂಗೆ ಒಣ ಗಾಳಿ, ನಿಂದಂಗೆ ಹಳೆ ಚಾಳಿ, ನನ್ನೊಡನೆ ಬೇಸಿಗೆ ಬಂದಾಗಿದೆ. ಏಕಾಂತ ಮರದಡಿ, ನೆಮ್ಮದಿ ನೆರಳಡಿ, ಹುಲ್ಲು ಹಾಸಿನ ಮೇಲೆ ಆಟಾಡಿದೆ. ಬೆಚ್ಚಗಿನ ಬಿಸಿಲು, ಬೆಳಗಿನ ಹೊತ್ತು, ಬೇಸಿಗೆಯ ಕಾವು, ಚಳಿಗಾಲಕೆಶ್ಟು ಗೊತ್ತು? ಬಂಗಾರದ ಬೆಳಕು ಸಂಜೆಗೆ ಏರಿ, ಇಳಿಹೊತ್ತಿನ ಧೂಳು ಆಗಸಕೆ ಹಾರಿ, ಬಂದಂಗಿದೆ ಊರಿಗೆ ಮತ್ತೊಂದು ಬಗೆ, ಮತ್ತೊಮ್ಮೆ ತಂತು ಬಂಗಾರದ...
-
ನಾಕ
ಕೈಕೊಡೊ ಊರಲ್ಲಿ, ಚೊಂಬು ಕೊಡೋಳು ಸಿಕ್ಳು, ಬದುಕು ನಶ್ವರ ಅನ್ಕಂಡಿದ್ದೋನಿಗೆ, ಹಿಂಗೆ ಕಟ್ಟಾಕಿದ್ಯಲ್ಲೊ ಚೊಂಬೇಶ್ವರ. ಈಗೆತ್ಲಾಗೆ ಓಡೋಗ್ಲಿ, ಸುತ್ತೆಲ್ಲ ಇವ್ಳೆ. ಹೊತ್ತನ್ನ ಕಳಿತಾಳೆ ಮಾತುಮಾತಲ್ಲೆ. ಮರುಮಾತೆ ಬಾರದು, ಏನಂತ ಹೇಳ್ಲಿ, ಗೊಂದಲ ಏನೂ ಇಲ್ಲ, ನಾ ಕಟ್ಟಾಕಿರುವ ಗೂಳಿ. ಕೈಕೊಡೋರ ನಡುವೆ, ಚೊಂಬು ಕೊಡೋಳು ಸಿಕ್ಳು, ಬದುಕು ಆಥರ ಅಂತಿದ್ದೋನಿಗೆ, ಈಥರ ಮಾಡಿದ್ಯಲ್ಲೊ ಚೊಂಬೇಶ್ವರ. ಅಲ್ಲಿಲ್ಲ ಇಲ್ಲಿಲ್ಲ ಇದರಂಗೆ ಹೋಲಿಕೆ, ಇವಳ ಜಗಳವು, ಈ ಮನೆಗಂತೆ ಮಲ್ಲಿಗೆ. ಒಡವೆ, ಅಲಂಕಾರ,...