• ಕರಗು

    ಕರಗದಿರುವ ಮನಸ್ಸು ಉಂಟೆ, ನೀರು ಬಿದ್ದ ಕಲ್ಲು ಒರಟೆ? ಬದುಕನಿಂದ ಕಲಿತ ಮನಕೆ, ಯಾವುದರಿಂದ ಏನು ತಂಟೆ. ಸಾವಿರ ತಿರುವು ಬಂದಾಗ ನಿತ್ಯ ಕಾಲ ಬಳಿಗೆ, ಸಾವಿರ ಭಾವ ಬಡಿದಾಗ ಮನಕೆ ಒಂದೇ ಸರಿಗೆ, ಒಡನಾಟದಿ ಕಲೆವ ಮನವು, ಓಗೊಡದೆ ಇರುವುದೆ ಮತ್ತೊಬ್ಬರ ಗೋಳಿಗೆ. ಕರಗಿಬಿಡಲಿ ಎಲ್ಲ ಬೇಗುದಿ, ಎದೆಯ ತುಂಬುತಾ ನಿತ್ಯ ನೆಮ್ಮದಿ, ಎಲ್ಲ ಮನ್ನಿಸಿ ಕರಗಿಬಿಡು, ಹಿಡಿದು ನಡೆ ನೀ ಹೊಸದೊಂದು ಹಾದಿ. - ಆದರ್ಶ


  • ಅನುಭವ

    ಬೀಜ ಇಟ್ಟು, ಗೊಬ್ಬರ ಹಾಕಿ, ಮಣ್ಣು ಮುಚ್ಚಿ, ನೀರ ಬಿಡಿ, ಗಿಡ ಹುಟ್ಟಿದಮೇಲೆ ಅದನ್ನ, ಅದರ ಅನುಭವಕೆ ಬಿಡಿ. ಪ್ರಾಣಿ, ಹಕ್ಕಿ, ಹುಳು ತಿನ್ನಲಿ, ಬೆಳೆಯದಂಗೆ ಸೊರಗಲಿ, ಅದರ ಜೀವ ಅದರದು, ತಾನೇ ಹೋರಾಡಲು ಬಿಡಿ. ಬೆಳೆದು ನಿಂತು ಹೆಮ್ಮರವಾಗಲಿ, ನಿತ್ಯ ನೂರು ಹಣ್ಣು ಬಿಡಲಿ, ಅದರ ಹಣೆಬರಹ ಅದರದು, ಅದರ ಅನುಭಕೆ ಬಿಡಿ. ಬೆಳೆದ ಮರ ಬಾಗದು, ಜೋತು ಬಿದ್ದರೂ ಹಣ್ಣು ಕೊಡದು, ಕಾಲ ಬಂದಾಗ ಬರುವುದು, ಬದುಕ...


  • ಹಾಫ್ ಟಿಕೆಟ್

    "ಮುಂದಿನ ವಾರ ದೀಪಾವಳಿ ಗೆ ಫ್ಯಾಕ್ಟರಿ ಪೂಜೆ ಇರುತ್ತೆ, ಪೂಜೆ ಮಾರನೇ ದಿನ ರಜ ಕೊಡ್ತಾರೆ, ಜೊತೆಗೆ ಐನೂರೋ ಸಾವಿರನೊ ಕಾಸು ಕೂಡ ಕೊಡಬಹುದು" ಅಂತ ಜೊತೆಯಲ್ಲಿದ್ದವನು ಹೇಳಿದಾಗ ಇವನಿಗೆ ಸ್ವಲ್ಪ ಖುಷಿಯಾಗಿರಬಹುದು. ಕಳೆದ ಆರು ತಿಂಗಳಿಂದ ರಜ ತೆಗೆದುಕೊಂಡಿರಲಿಲ್ಲ , ಓನರ್ ಕೂಡ ಕೊಟ್ಟಿರಲಿಲ್ಲ. ಶನಿವಾರ ಭಾನುವಾರ ಅನ್ನದೆ ಕೆಲಸ ಮಾಡುತ್ತಿದ್ದ. ಆರು ತಿಂಗಳ ಮೊದಲು ಹೀಗೆ ಇರಲಿಲ್ಲ. ಅಪ್ಪ ಸಾಯುವ ವರೆಗೂ ಅಪ್ಪ ಮಾಡಿದ್ದ ಸಾಲದ ಬಗ್ಗೆ...


  • ಮರೆತೋಗು

    ನೆನಪಿಟ್ಕಂಡು ಏನ್ ಮಾಡ್ತಿ ಹುಚ್ಚ, ನಡೆದಿದ್ನೆಲ್ಲ ಮರ್ತೋಗು. ಗಾಯಗಳ ಪೆಟ್ಟು ನೂರಾರು ಬಿದ್ದೋಗ್ಲಿ, ಹರಿದು ಆವಿಯಾಗೊ ನೀರಾಗು. ಹಳೆದಾರಿ ಹಿಂದಾಕಿ ಊರ್ಬಿಟ್ಟು ಓಡೋಗು, ನೆನಪುಗಳ್ನೆಲ್ಲ ತಿರುವಾಕಿ ಏನ್ ಮಾಡ್ತಿ, ಬರೆದ ಪತ್ರಗಳೆಲ್ಲ ಹರಿದಾಕು. ನೆನಪಿದು ಬಿಳಿಮಂಜು, ಬಿದ್ದಂಗೆ ಕರಗಲಿ, ಅದೆಷ್ಟೆ ನೋವಿರಲಿ, ಅಳು ಬಂದು ನಿಂತೋಗಲಿ. ಗುಡಿಲಿರುವ ದೇವರು ಕುಂತಂಗೆ ನೀನಾಗು, ಊರೆಲ್ಲ ನೋಡಿ ಬಂದು ಸಿಕ್ಕ ನೋವ ಮರೆತೋಗು. ನೆನಪಿಟ್ಕಂಡು ಏನ್ ಮಾಡ್ತಿ ಹುಚ್ಚ, ಅನ್ಸ್ಕಂಡಿದ್ನೆಲ್ಲ ಮರ್ತೋಗು. ಅವಮಾನ...


  • ಎದೆಯನಪ್ಪಿದ

    ಎದೆಯನಪ್ಪಿದ ಮೊಗವನು ಎತ್ತಿ ನೋಡಲಿ ಹೇಗೆ, ಕಣ್ಣು ತುಂಬಿ ಹರಿದ ಮೇಲೆ ಒಲವು ತಂದ ಬೇಗೆ. ಸೇರುತಿರಲಿ ರಾಗಗಳು ನಿತ್ಯವೂ ಸರಾಗವಾಗಿ, ಒಲವ ಜಪಿಸಿ ಬದುಕಿದವನೆ ನಿತ್ಯ ಶಾಂತ ಯೋಗಿ. ಬೇಡವೆನ್ನಲಿ ಹೇಗೆ ಒಲವು ತಂದ ಮಳೆಯ, ಸೋನೆಯಲ್ಲಿ ತಣಿದ ಮನವು ಈಗ ತಾನು ದಿವ್ಯ. ಮನದ ಕಾಂತಿ ಚಿಮ್ಮಿ ಬೀರಿದೆ, ಜೊತೆಗೆ ಇರುವ ಬಯಕೆ, ಓಟ ಕಿತ್ತ ಮನಸ್ಸ ಹಿಡಿದು ನಿಲ್ಲಿಸಿತು ಈ ಅರವಳಿಕೆ. ಅರಳಿದಂತ ಹೂವು ತನ್ನ...